ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಾಂಗ್ರೆಸ್ ಮುಖಂಡ, ಮಾಜಿ ಕಾರ್ಪೊರೇಟರ್ ಪ್ರಚೋದನಾತ್ಮಕ ಹೇಳಿಕೆ ವಿವಾದ

ಹುಬ್ಬಳ್ಳಿ : ಮುಸ್ಲಿಂ ಸಮುದಾಯದ ಸಭೆಯೊಂದರಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕಾರ್ಪೊರೇಟರ್ ಮಾಡಿದ ಪ್ರಚೋದನಾತ್ಮಕ ಭಾಷಣ ಈಗ ವಿವಾದಕ್ಕೆ ಕಾರಣವಾಗಿದೆ.

ನಗರದ ಮಾಧವ ನಗರದಲ್ಲಿ ನಡೆದ ಮುಸ್ಲಿಂ ಸಮುದಾಯದ ಸಭೆಯಲ್ಲಿ ಮಾತನಾಡಿದ ರಾಯನಗೌಡ್ರ, " ಅವರು ಇತ್ತೀಚೆಗೆ ಗಣೇಶ ಉತ್ಸವ ಆಚರಣೆ ಮಾಡಲಿಲ್ಲವೇ..? ನೀವೂ (ಮುಸ್ಲಿಂರು) ಹಬ್ಬ ಮಾಡಿ, ಯಾವ ಮಗಾ ಬರುತ್ತಾನೆ ನಾನು ನೋಡಿಕೊಳ್ಳುತ್ತೇನೆ ಎಂದು ರಾಯನಗೌಡ್ರ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅವರು ಗಣೇಶನ ಹಬ್ಬ ಮಾಡಿದ್ದಾರೆ ನೀವು ನಿಮ್ಮ ಹಬ್ಬ ಮಾಡಿ ಎಂದು ರಾಯನಗೌಡ್ರ ಹೇಳಿದ್ದಾರೆ. ಅನಗತ್ಯ ಸಂಘರ್ಷಕ್ಕೆ ಕಾರಣವಾದ ರಾಯನಗೌಡ್ರ ಮಾತುಗಳು ಸಾರ್ವಜನಿಕ ವಲಯದಲ್ಲಿ ಇದೀಗ ತೀವ್ರ ಚರ್ಚೆಗೆ ಒಳಗಾಗಿದೆ. ಅವರು ಈ ರೀತಿ ಹೇಳಿಕೆ ನೀಡುವ ಅಗತ್ಯವೇನಿತ್ತು ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.

Edited By : Manjunath H D
Kshetra Samachara

Kshetra Samachara

25/09/2021 01:04 pm

Cinque Terre

108.88 K

Cinque Terre

105

ಸಂಬಂಧಿತ ಸುದ್ದಿ