ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬೇರೆಯವರಿಗೆ ಮೊಬೈಲ್ ಕೊಡುವ ಮುನ್ನ ಎಚ್ಚರ -ವಾಣಿಜ್ಯ ನಗರಿಯಲ್ಲಿದ್ದಾರೆ ಖತರ್ನಾಕ್ ಕಳ್ಳರು

ಹುಬ್ಬಳ್ಳಿ: ರೈಲಿನಲ್ಲಿ ಊರಿಗೆ ತೆರಳುತ್ತಿದ್ದ ವಿದ್ಯಾರ್ಥಿಯೊಬ್ಬನ ಬಳಿ, ಕಳ್ಳನೊಬ್ಬ ಮಾತನಾಡೋ ನೆಪದಲ್ಲಿ ಮೊಬೈಲ್ ತಗೆದುಕೊಂಡು ನಂತರ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿ‌, ಮೊಬೈಲ್‌ ಕಸಿದುಕೊಂಡು ಪರಾರಿಯಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಧಾರವಾಡದ ಜೆಎಸ್ ಎಸ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಶಂಕರ್ ಮಹಾಜನಶೆಟ್ಟರ್, ಇಂದು ಕಾಲೇಜು ಮುಗಿಸಿ ಹುಬ್ಬಳ್ಳಿಯ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ಲಕ್ಷ್ಮೇಶ್ವರಕ್ಕೆ ತೆರಳುತ್ತಿದ್ದ ವೇಳೆ, ರೈಲ್ವೆ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಬೇರೆಯವರಿಗೆ ತುರ್ತಾಗಿ ಪೋನ್ ಮಾಡುವುದಾಗಿ ಮೊಬೈಲ್ ಪೋನ್ ತಗೆದುಕೊಂಡಿದ್ದ, ನಂತರ ವಿದ್ಯಾರ್ಥಿ ಶಂಕರ ಬಳಿ ಮೊಬೈಲ್ ಪಡೆದ ವ್ಯಕ್ತಿ ಬೇರೆಯವರಿಗೆ ಪೋನ್ ಮಾಡುತ್ತಾ ರೈಲ್ವೆ ನಿಲ್ದಾಣದಿಂದ ಹೊರಗಡೆ ಆಗಮಿಸಿ ಪರಾರಿಯಾಗಲು ಯತ್ನಿಸಿದ. ಈ ವೇಳೆ ವಿದ್ಯಾರ್ಥಿ ಶಂಕರ್ ಮೊಬೈಲ್ ಕಳ್ಳನ ಬೆನ್ನಹತ್ತಿದ್ದ ನಂತರ ಕಳ್ಳ ವಿದ್ಯಾರ್ಥಿಯ ತೆಲೆಗೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.

ಘಟನೆಯ ನಂತರ ಹಲ್ಲೆಗೆ ಒಳಗಾದ ವಿದ್ಯಾರ್ಥಿಗೆ ಸ್ಥಳೀಯರು ಸಹಾಯ ಮಾಡಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಉಪನಗರ ಠಾಣೆ ಪೊಲೀಸರು ವಿದ್ಯಾರ್ಥಿ ಬಳಿ‌ ಮಾಹಿತಿ ಪಡೆದು ಮೊಬೈಲ್ ಕಳ್ಳನಿಗೆ ಬಲೆ ಬೀಸಿದ್ದಾರೆ.

Edited By : Manjunath H D
Kshetra Samachara

Kshetra Samachara

24/09/2021 06:18 pm

Cinque Terre

131.43 K

Cinque Terre

16

ಸಂಬಂಧಿತ ಸುದ್ದಿ