ಹುಬ್ಬಳ್ಳಿ: ಕೊಪ್ಪಳ ಜಿಲ್ಲೆಯ ಹನುಮಸಾಗರದ ಮಿಯಾಪೂರ ಗ್ರಾಮದಲ್ಲಿನ ಮಾರುತಿ ದೇವಾಲಯಕ್ಕೆ, ದಲಿತರ ಮೂರು ವರ್ಷದ ಮಗು ದೇವಾಲಯದ ಒಳಗೆ ಪ್ರವೇಶ ಮಾಡಿದಕ್ಕೆ, ದೇವಾಲಯಕ್ಕೆ ಸಂಬಂಧಿಸಿದವರು ದೇವಸ್ಥಾನ ಅಪಾವಿತ್ರ್ಯವಾಗಿದೆ ಎಂದು ಆ ಬಾಲಕಿಯ ಪಾಲಕರಿಗೆ 25,000 ರೂ. ದಂಡ ವಿಧಿಸಿದ ಅಮಾನವೀಯ ದುರ್ಘಟನೆ ಖಂಡಿಸಿ, ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ, ಮತ್ತು ಸಮತಾಸೇನಾ ವತಿಯಿಂದ ನಗರದ ತಹಶೀಲ್ದಾರ ಕಚೇರಿ ಎದುರಿಗೆ ಪ್ರತಿಭಟನೆ ಮಾಡಿ, ತಹಶೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ನೀಡಿದರು.
Kshetra Samachara
23/09/2021 01:50 pm