ಹುಬ್ಬಳ್ಳಿ : ಹಣಕ್ಕಾಗಿ ನವಜಾತ ಶಿಶುವಿನ ಮಾರಾಟ ಪ್ರಕರಣ ಬೆಳಕಿಗೆ ಬಂದಿದ್ದು, ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು,ವಿಜಯಪುರ ಜಿಲ್ಲೆಯಲ್ಲಿ ನಾಪತ್ತೆಯಾಗಿದ್ದ ಗಂಡು ಮಗು ಹುಬ್ಬಳ್ಳಿಯಲ್ಲಿ ಪತ್ತೆಯಾಗಿದೆ.
ವಿಜಯಪುರದಲ್ಲಿ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಸುದ್ಧಿಯಾಗಿದ್ದ ನವಜಾತ ಶಿಶು ಮಾರಾಟ ಪ್ರಕರಣ ಈಗ ಹೊಸ ತಿರುವನ್ನು ಪಡೆದುಕೊಂಡಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನವಜಾತ ಮಗು ಪತ್ತೆಯಾಗಿದೆ. ಮಗುವಿಗೆ ಅನಾರೋಗ್ಯವಾದ ಕಾರಣ ಮಗು ಕಿಮ್ಸ್ ಗೆ ದಾಖಲಿಸಲಾಗಿದ್ದು, ಮಗು ಮಾರಾಟಕ್ಕೆ ತೆಗೆದುಕೊಂಡವರಿಂದಲೇ ಕಿಮ್ಸ್ ನಲ್ಲಿ ಮಗು ದಾಖಲಾಗಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಇನ್ನೂ ಮಕ್ಕಳಿಲ್ಲದ ಕಾರಣ ಗಂಡು ಮಗುವನ್ನು ಸಿಂದಗಿ ಮೂಲದ ವ್ಯಕ್ತಿಯಿಂದ ಖರೀದಿ ಮಾಡಲಾಗಿತ್ತು.ಅಲ್ಲದೇ ಮಗುವಿನ ತಾಯಿ ಹಾಗೂ ಸಂಬಂಧಿಕರೇ ಮಗುವನ್ನು ಮಾರಾಟ ಮಾಡಿದ್ದರು. ಕಳೆದ ಆಗಸ್ಟ್ 26 ರಂದು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ತಾಯಿಯೇ ತನ್ನ ನವಜಾತ ಶಿಶುವನ್ನು ಮಾರಾಟ ಮಾಡಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಈ ಘಟನೆ ಕುರಿತು ಸಪ್ಟೆಂಬರ್ 12 ರಂದು ವಿಜಯಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ನವಜಾತ ಶಿಶುವಿನ ಮಾರಾಟದಲ್ಲಿ ಜಿಲ್ಲಾ ಆಸ್ಪತ್ರೆ ಸ್ಟ್ಯಾಫ್ ನರ್ಸ್ ಕಸ್ತೂರಿ ಕೈವಾಡವಿದೆ ಎಂಬುವಂತ ಆರೋಪದ ಮೇಲೆ ಕಸ್ತೂರಿಯನ್ನು ಪ್ರಕರಣ ಬಳಿಕ ಸೇವೆಯಿಂದ ಅಮಾನತ್ತು ಮಾಡಲಾಗಿತ್ತು.
ಇನ್ನೂ ಸ್ಟ್ಯಾಫ್ ನರ್ಸ್ ಕಸ್ತೂರಿ ಮೂಲಕ ರೇಣುಕಾ ಕಾಂಬಳೆ ಮಾರಾಟ ಮಾಡಿದ್ದಾಗಿ ತಿಳಿದು ಬಂದಿದೆ. ಆಕೆಯ ಪತಿ ಮಂಜುನಾಥಗೆ ಮಗುವನ್ನು ಮಾರಾಟ ಮಾಡಿದ್ದಾಗಿ ಮಾಹಿತಿ ನೀಡಿದ್ದಳು. ಮಂಜುನಾಥನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದರು. ಇದಾದ ಬಳಿಕ ಮಗು ಪತ್ತೆಯಾಗಿದ್ದು ತನಿಖೆ ಮತ್ತೆ ಚುರುಕುಗೊಂಡಿದ್ದು, ಹುಬ್ಬಳ್ಳಿಯ ಕಿಮ್ಸ್ ನ ತೀವ್ರ ನಿಗಾ ಘಟಕದಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.
Kshetra Samachara
22/09/2021 01:32 pm