ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕುಸುಗಲ್ ಗ್ರಾಮದಲ್ಲಿ ಮನೆಗಳ್ಳತನ ಲಕ್ಷಾಂತರ ರೂ. ದೋಚಿದ ಕಳ್ಳರು! ಕಣ್ಣಿರು ಹಾಕಿದ ಕುಟುಂಬಸ್ಥರು

ಹುಬ್ಬಳ್ಳಿ: ಮನೆಯಲ್ಲಿ ಯಾರು ಇಲ್ಲದನ್ನು ಮನಗಂಡ ಕಳ್ಳರು, ಮನೆಯ ಬೀಗ ಮುರಿದು ಕನ್ನ ಹಾಕಿ ನಗದು ಹಗೂ ಆಭರಣಗಳನ್ನು ಕದ್ದು ಪರಾರಿಯಾಗಿರುವ ಘಟನೆ, ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮಾರುತಿ ನಗರದ ನಿವಾಸಿ ಕಾಳಪ್ಪ ಬಡಿಗೇರ್ ಎಂಬುವವರ ಮನೆಯೇ ಕಳತನವಾಗಿದ್ದು, ಇವರು ಕಳೆದು ಎರಡು ದಿನಗಳಿಂದ ಬಸವಣ್ಣನ ದೇವಸ್ಥಾನದಲ್ಲಿ ವಾಸವಿದ್ದರು. ಈ ಎಲ್ಲಾ ವಿಚಾರ ತಿಳಿದುಕೊಂಡ ಕಳ್ಳರು, ಶನಿವಾರ ತಡರಾತ್ರಿ ಮನೆ ಬೀಗ ಮುರಿದು ಮನೆಗೆ ನುಗ್ಗಿದ ಕಳ್ಳರು, ಮನೆಯಲ್ಲಿದ್ದ ಹಣ, ಆಭರಣವನ್ನು ದೋಚಿಕೊಂಡು ಹೋಗಿದ್ದಾರೆ. ಇನ್ನು ಹಣ ಆಭರಣ ಕಳೆದುಕೊಂಡ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಅದೇ ನಗರದಲ್ಲಿರುವ ಮಾರುತಿ ಮಂದಿರಕ್ಕೆ ಕಣ್ಣ ಹಾಕಲು ಯತ್ನಿಸಿದ ಕಳ್ಳರ ಪ್ರಯತ್ನ ವಿಫಲವಾಗಿದೆ. ಇನ್ನು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಗ್ರಾಮೀಣ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Manjunath H D
Kshetra Samachara

Kshetra Samachara

20/09/2021 10:41 am

Cinque Terre

70.13 K

Cinque Terre

1

ಸಂಬಂಧಿತ ಸುದ್ದಿ