ಹುಬ್ಬಳ್ಳಿ- ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊರ್ವ ನ್ಯಾಯಾಲಯದ ಸೆಕ್ಯುರಿಟಿಯನ್ನು ಹಿಗ್ಗಾಮುಗ್ಗಾ ತಳಿಸಿರುವ ಘಟನೆ ಹುಬ್ಬಳ್ಳಿಯ ಹೊಸ ಕೋರ್ಟ್ ಬಳಿ ನಡೆದಿದೆ.
ಕೋರ್ಟ್ ಕೇಸ್ ವಿಚಾರಕ್ಕೆ ಬಂದಿದ್ದ ವ್ಯಕ್ತಿಯೊರ್ವನಿಗೆ, ಬೈಕ್ ಒಳಗಡೆ ಪ್ರವೇಶವಿಲ್ಲ ಎಂದು ಸೆಕ್ಯುರಿಟಿ ಹೇಳಿದರಂತೆ. ಮಾತಿಗೆ ಮಾತು ಬೆಳೆದು ಕೈ ಮಿಲಾಸುವ ಹಂತಕ್ಕೆ ಜಗಳ ತಲುಪಿದೆ. ನಮ್ಮ ಡ್ಯೂಟಿ ಮಾಡಿದರೂ ಸಹ ಕಾರಣವಿಲ್ಲದೆ ಹೊಡೆದಿದ್ದಾರೆಂದು ಸೆಕ್ಯುರಿಟಿ ಆರೋಪ ಮಾಡಿದ್ದಾನೆ. ಇನ್ನು ಸಾರ್ವಜನಿಕ ಹೇಳುದಾದರೆ ಸೆಕ್ಯುರಿಟಿ ಬೈದಿದಕ್ಕೆ ನಾನು ಕೈ ಮಾಡಿದ್ದೆನೆಂದು ಹೇಳುತ್ತಾರೆ. ಇನ್ನು ಜಗಳ ಮಾಡಿದ ಪರಿಣಾಮ, ಸೆಕ್ಯುರಿಟಿಗೆ ಮುಖ ಹಾಗೂ ಕೈಗಳಿಗೆ ಗಾಯವಾಗಿದ್ದು ಸ್ಥಳೀಯರು ಜಗಳ ಬಿಡಿಸಿದ್ದಾರೆ. ಇಬ್ಬರು ಕೂಡಿ ನ್ಯಾಯಾಧೀಶರ ಬಳಿ ಹೋಗಿದ್ದಾರೆ.
Kshetra Samachara
18/09/2021 06:26 pm