ನವಲಗುಂದ : ಶುಕ್ರವಾರ ತಡರಾತ್ರಿ ತಾಲೂಕಿನ ಹಲವೆಡೆ ನಡೆದ ಟ್ರ್ಯಾಕ್ಟರ್ ಗಳ ಬ್ಯಾಟರಿ ಕಳ್ಳತನ ನಡೆದ ಹಿನ್ನಲೆ ಶನಿವಾರ ನವಲಗುಂದ ಪೊಲೀಸ್ ಠಾಣೆಯ ಪಿ ಎಸ್ ಐ ಕಲ್ಮೇಶ ಬೆನ್ನೂರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹೌದು ನವಲಗುಂದ ತಾಲೂಕಿನ ಗುಮ್ಮಗೋಳ, ಶಿರೂರು, ಮೊರಬ, ಬ್ಯಾಲ್ಯಾಳ ಗ್ರಾಮಗಳಲ್ಲಿ ಕಳ್ಳರು ರಾತ್ರೋ ರಾತ್ರಿ ರಸ್ತೆ ಬದಿ ನಿಲ್ಲಿಸಲಾಗಿದ್ದ ಟ್ರ್ಯಾಕ್ಟರ್ ಗಳ ಬ್ಯಾಟರಿಗಳನ್ನು ಏಗರಿಸಿದ್ದರು. ಈ ವಿಷಯ ತಿಳಿದ ಕೂಡಲೇ ಪಿ ಎಸ್ ಐ ಕಲ್ಮೇಶ ಬೆನ್ನೂರ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
Kshetra Samachara
18/09/2021 05:49 pm