ಧಾರವಾಡ: ಏಳು ದಿನದ ಗಣಪತಿ ವಿಸರ್ಜನೆ ಮಾಡಲು ಹೊರಟವರ ಮೇಲೆ ಎಸಿಪಿ ಅನುಶಾ ಅವರು ಲಾಠಿ ಪ್ರಹಾರ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ನಿನ್ನೆ ತಡರಾತ್ರಿ ಯುವಕ ಮಂಡಳದ ಸದಸ್ಯರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ.
ಧಾರವಾಡದ ಹೊಸಯಲ್ಲಾಪುರದ ಬಳಿ ಈ ಘಟನೆ ನಡೆದಿದ್ದು, ಪೊಲೀಸರ ಮೇಲೆ ಯುವಕ ಮಂಡಳದ ಸದಸ್ಯರು ಗರಂ ಆಗಿದ್ದಾರೆ.
ಲಾಠಿ ಪ್ರಹಾರ ನಡೆಸಿದ ನಂತರ ಪೊಲೀಸರು ಮತ್ತು ಯುವಕ ಮಂಡಳದ ಸದಸ್ಯರ ನಡುವೆ ತೀವ್ರ ವಾಗ್ವಾದ ಕೂಡ ನಡೆದಿದೆ.
Kshetra Samachara
17/09/2021 10:22 am