ಕುಂದಗೋಳ : ನಮಸ್ಕಾರಿ ರೀ ಕುಂದಗೋಳ ಮಂದಿ ನಿಮ್ಮ ಮನಿ ಕೀಲಿ ಹಾಕಿ ಎಲ್ಲೇರ ಹೊಂಟಿದ್ರ, ಎಲ್ಲೇರ ಬೈಕ್ ಪಾರ್ಕಿಂಗ್ ಮಾಡಿದ್ರ, ಕುಂದಗೋಳ ಬುಧವಾರ ಸಂತಿಗೆ ಬಂದಿದ್ರ, ಮತ್ತ್ ರೈತರ ನೀವೂ ಎಲ್ಲಾದ್ರೂ ಎತ್ತು, ಎಮ್ಮೆ, ದನ, ಕರಾ ಹೊರಗ ಕಟ್ಟಿದ್ರ ಬಾಳ್ ಅಂದ್ರ ಬಾಳ್ ಹುಷಾರಿ ಬೇಕ್ ನೋಡ್ರೀ ಪಾ.
ಏನ್ರೀ ಪಬ್ಲಿಕ್ ನೆಕ್ಸ್ಟ್ ಯಾಕ್ ಏನಾಯ್ತು ಅಂತಿರೇನು ? ಏನಿಲ್ರೀ ಪಾ ನಿಮ್ಮ ಕುಂದಗೋಳ ತಾಲೂಕಿನ್ಯಾಗ ಕಳ್ಳತನ ಹೆಚ್ಚ್ ಆಗ್ಯಾವ್ ಅಂತ್ ಬೈಕ್,ಮೊಬೈಲ್, ಡಬ್ಬಿ ಅಂಗಡಿ, ಜಾನುವಾರು, ಮನೆ ಮಠಾ ಸಹಿತ ಉಳಿತಾ ಇಲ್ಲಾ ಎಲ್ಲಾ ಕಳ್ಳರ ಪಾಲ್ ಆಗಾಕತ್ತಾವ್ ಅಂತ್ ಇದಕ್ಕ ಸಾಕ್ಷಿ ಇಲ್ನೋಡ್ರಿ ಮನೆ ಕಳ್ಳತನ ಆದವ್ರ ನಿಮ್ಗ ಪರಿಸ್ಥಿತಿ ಏನು ಅನ್ನುದು ಹೇಳ್ತಾರ.
ಕೇಳಿದ್ರಲ್ಲಾ ಬರೆ ಹಳ್ಳಿ ಅಷ್ಟೇ ಅಲ್ಲಾ ಕುಂದಗೋಳದಾಗೂ ಕಳ್ಳರ ಬಂದಾರ್, ಈ ಸುದ್ಧಿ ಕೇಳಿ ಕೇಳಿ ಜನ ಭಯದ ವಾತಾವರಣದಾಗ ಜೀವನ ಮಾಡು ಪರಿಸ್ಥಿತಿ ನಿರ್ಮಾಣ ಆಗೇತಿ ಈ ಬಗ್ಗೆ ನಮ್ಮ ಅಜ್ಜಾರ ಮತ್ತ್ ಸಾರ್ವಜನಿಕರು ಏನು ಹೇಳಿದ್ರೂ ಗೊತ್ತಾ ?
ಈ ಕಳ್ಳತನದ ವಿಚಾರದ ಬಗ್ಗೆ ಸಾಹೇಬ್ರೆ ಏನು ಕ್ರಮ ತಗೋಂಡಿರಿ ಅಂದ್ರೇ ನಮ್ಮ ತಹಶೀಲ್ದಾರ ಅಗತ್ಯ ಕ್ರಮ ತಗೋಂಡೇವಿ ಪೊಲೀಸರು ಜೊತೆ ಮಾತಡೇನಿ ಅದೇನ್ ಮಾತಡ್ಯಾರ ಕೇಳ್ರಿ.
ನೋಡ್ರೀ, ಕುಂದಗೋಳ ತಾಲೂಕಿನ ಮಹಾಜನತೆ ನಿಮ್ಮ ಮನೆ ನಿಮ್ಮ ವಸ್ತು ಕಳ್ಳತನ ಆಗುವ ಮೊದಲೇ ಎಚ್ಚರ ವಹಿಸ್ರೀ ಹೋದ ವಸ್ತು ಮರಳಿ ಬರಂಗಿಲ್ಲಾ ಸಂಬಂಧಪಟ್ಟ ಕುಂದಗೋಳ ಗ್ರಾಮೀಣ ಪೊಲೀಸ್ ಅಧಿಕಾರಿಗಳೇ ದಯವಿಟ್ಟು ಇಂತಹ ಕಳ್ಳತನಕ್ಕೆ ಬ್ರೇಕ್ ಹಾಕಿ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್ ಕುಂದಗೋಳ
Kshetra Samachara
16/09/2021 03:36 pm