ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರವನ್ನು ಸ್ಮಾರ್ಟ್ ಮಾಡಲು ಸರ್ಕಾರ ಸಾಕಷ್ಟು ಯೋಜನೆಯನ್ನು ಜಾರಿಗೊಳಿಸಿದೆ. ಆದರೆ ಕೆಲವು ದೊಡ್ಡ ಕೈಗಳ ಕೈ ಚಳಕದಿಂದ ಅವಳಿನಗರ ಸ್ಮಾರ್ಟ್ ಆಗದೇ ಎಲ್ಲೊಲ್ಲ ಕಲ್ಲೋಲ ಆಗುತ್ತಿದೆ.
ಹೌದು.. ಖಾಸಗಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆದಿದ್ದು, ಏಕಾಏಕಿ ಸಾರ್ವಜನಿಕ ಬಸ್ ನಿಲ್ದಾಣ ಹಾಗೂ ಫುಟ್ ಪಾತ್ ಮಾಯವಾಗಿದೆ. ಇಷ್ಟು ದಿನ ಇದ್ದ ಬಸ್ ಸ್ಟಾಪ್ ಧಿಡೀರ್ ಮಾಯವಾಗಿದ್ದು, ಹುಬ್ಬಳ್ಳಿಯ ವಿದ್ಯಾನಗರದ ಶಿರೂರು ಪಾರ್ಕ್ ಬಳಿ ಇದ್ದ ಬಸ್ ನಿಲ್ದಾಣವೇ ಮಂಗಮಾಯಾ ಆಗಿದೆ.
ನೂತನ ಕಟ್ಟಡ ಕಾಮಗಾರಿಗೆ ಬಸ್ ನಿಲ್ದಾಣ ಅತಿಕ್ರಮಣವಾಗಿದ್ದು, ಕಟ್ಟಡ ಕಟ್ಟುವ ನೆಪದಲ್ಲಿ ಫುಟ್ ಪಾತ್ ಜೊತೆಗೆ ಬಸ್ ನಿಲ್ದಾಣವನ್ನೇ ಅತಿಕ್ರಮಿಸಿದ್ದಾರೆ. ಅಲ್ಲದೇ ದೊಡ್ಡ ದೊಡ್ಡವರ ಕಟ್ಟಡ ಕಾರ್ಯಕ್ಕೆ ಬಸ್ ನಿಲ್ದಾಣ ಹಾಗೂ ಪುಟ್ ಪಾತ್ ಅತಿಕ್ರಮಣವಾಗಿದೆ.
ಸುನಿಲ್ ಕೊಠಾರಿ ಎನ್ನುವವರಿಂದ ಕಟ್ಟಡ ನಿರ್ಮಾಣ ನಡೆಯುತ್ತಿದ್ದು, ಪಾಲಿಕೆಯ ಹಲವು ನೋಟಿಸ್ ಗೂ ಕ್ಯಾರೆ ಎನ್ನದೇ ಬೇಕಾಬಿಟ್ಟಿಯಾಗಿ ಕಟ್ಟಡ ನಿರ್ಮಾಣ ಕಾರ್ಯ ನಡೆದಿದೆ. ಬಹು ಅಂತಸ್ತಿನ ಕಟ್ಟಡಕ್ಕೆ ರಾಜಕಾರಣಿಗಳ ಆಶೀರ್ವಾದಿಂದ ಬಸ್ ನಿಲ್ದಾಣ ಮಾಯವಾಗಿದೆ.
ಇನ್ನೂ ಬಸ್ ಸ್ಟಾಪ್ ನಿಂದ 4 ಅಡಿ ದೂರವಿರಬೇಕಿದ್ದ ಕಟ್ಟಡ. ಆದರೆ ಬಸ್ ಸ್ಟಾಪ್ ಮುಚ್ಚಿ ಕಾಮಗಾರಿ ಆರಂಭಿಸಿರುವ ಮಾಲೀಕನ ನಡೆಯಿಂದ ಬಸ್ ನಿಲ್ದಾಣವಿಲ್ಲದೆ ಸ್ಥಳೀಯರು ಪರದಾಡುವಂತಾಗಿದೆ. ಕೂಡಲೇ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ಜರುಗಿಸಬೇಕಿದೆ.
Kshetra Samachara
15/09/2021 03:33 pm