ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೆವೈಸಿ ಲಿಂಕ್ ಕಳಿಸಿ ವೈದ್ಯರಿಗೆ ವಂಚನೆ !

ಹುಬ್ಬಳ್ಳಿ: ದುಷ್ಕರ್ಮಿಯೊಬ್ಬ ನಗರದ ವೈದ್ಯರೊಬ್ಬರಿಗೆ ಕೆವೈಸಿ ಲಿಂಕ್ ಕಳಿಸಿ 65 ಸಾವಿರ ರೂ. ವಂಚನೆ ಮಾಡಿರುವ ಘಟನೆ ನಡೆದಿದೆ.

ವಂಚನೆ ಒಳಗಾದ ವೈದ್ಯರು ಗೋಕುಲ ರಸ್ತೆ ಮೊರಾರ್ಜಿ ನಗರ ನಿವಾಸಿಯಾಗಿದ್ದಾರೆ. ಅವರು ಆಸ್ಪತ್ರೆಯಲ್ಲಿದ್ದಾಗ ಕರೆ ಮಾಡಿದ ವ್ಯಕ್ತಿ, "ನಿಮ್ಮ ಎಸ್‌ಬಿಐ ಖಾತೆ ಬ್ಲಾಕ್ ಆಗಿದೆ. ಕೆವೈಸಿ ಅಪ್‌ಡೇಟ್ ಮಾಡಿಕೊಳ್ಳಿ" ಎಂದು ಸಂದೇಶ ಕಳುಹಿಸಿದ್ದಾನೆ. ಅವರು ತಮಗೆ ಬಂದ ಒಟಿಪಿ ಸಂಖ್ಯೆ ಹಾಕಿ ಸಬ್ಮಿಟ್ ಮಾಡಿದಾಗ ದುಷ್ಕರ್ಮಿಯು ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಈ ಕುರಿತು ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
Kshetra Samachara

Kshetra Samachara

13/09/2021 04:31 pm

Cinque Terre

26.27 K

Cinque Terre

0

ಸಂಬಂಧಿತ ಸುದ್ದಿ