ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಿಜಯ ಗುಂಟ್ರಾಳ ಮೇಲೆ ಹಲ್ಲೆ ಮಾಡಿಲ್ಲ! ಸುಳ್ಳು ಆರೋಪ ಮಾಡುತ್ತಿದ್ದಾರೆ- ಶ್ರೀನಿವಾಸ್ ಬೆಳದಡಿ ಸ್ಪಷ್ಟನೆ

ಹುಬ್ಬಳ್ಳಿ: ಕರ್ಕಿ ಬಸವೇಶ್ವರ ನಗರದಲ್ಲಿ ನಡೆದ ಘಟನೆ ಯಾವುದೇ ರಾಜಕೀಯ ಪ್ರೇರಿತವಲ್ಲ. ವಿಜಯ ಗುಂಟ್ರಾಳ ನಮ್ಮ ಜನಪ್ರಿಯತೆ ಸಹಿಸಿಕೊಳ್ಳಲಾಗದೇ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಶ್ರೀನಿವಾಸ್ ಬೆಳದಡಿ ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು, ಪಾಲಿಕೆ ಚುನಾವಣೆ ಫಲಿತಾಂಶದ ದಿನದಂದು ಓಣಿಯ ಚಿಕ್ಕ ಮಕ್ಕಳು ಗಲಾಟೆ ಮಾಡಿರುವುದನ್ನೇ ಇಟ್ಟುಕೊಂಡು ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ನನ್ನ ಒಳಗೊಂಡು ಅಮಾಯಕ 16 ಜನರ ಮೇಲೆ ದೂರು ದಾಖಲು ಮಾಡಿದ್ದಾರೆ. ಈ ಬಗ್ಗೆ ಜಾಮೀನು ಸಹಿತ ಪಡೆದಿದ್ದೇನೆ. ನಾನು ಕೂಡಾ ಪ್ರತಿದೂರು ದಾಖಲಿಸಿದ್ದೇನೆ.‌ ಪೋಲಿಸರು ಈ ಬಗ್ಗೆ ಸೂಕ್ತ ತನಿಖೆ ಕೈಕೊಳ್ಳಬೇಕು ಎಂದರು.

ಇನ್ನು, ಚುನಾವಣೆಯಲ್ಲಿ ಸೋಲು ಗೆಲುವು ಸಹಜ, ಜನರು ನೀಡಿರುವ ತೀರ್ಪನ್ನು ನಾವು ಒಪ್ಪಿಕೊಳ್ಳಲೇಬೇಕು. ನನಗೆ ಯಾವುದೇ ಹಲ್ಲೇ, ಜಗಳ ಮಾಡುವ ಉದ್ದೇಶವಿಲ್ಲ. ಈ ನಿಟ್ಟಿನಲ್ಲಿ ನಾನು ಜನರೊಂದಿಗೆ ಒಡನಾಟ ಇಟ್ಟುಕೊಂಡು ಬರುವ ಚುನಾವಣೆ ಎದುರಿಸಲು ಸಿದ್ದಗೊಳ್ಳುತ್ತಿದ್ದೇನೆ ಎಂದರು.

Edited By : Shivu K
Kshetra Samachara

Kshetra Samachara

11/09/2021 12:51 pm

Cinque Terre

67.39 K

Cinque Terre

0

ಸಂಬಂಧಿತ ಸುದ್ದಿ