ಧಾರವಾಡ: ಹೊಲದ ಮನೆಯಲ್ಲಿ ಕಟ್ಟಿದ್ದ ಷರ್ಯತ್ತಿನ ಜೋಡಿ ಎತ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಧಾರವಾಡ ತಾಲೂಕಿನ ನುಗ್ಗಿಕೇರಿ ಗ್ರಾಮದಲ್ಲಿ ನಡೆದಿದೆ.
ರಾಯಪ್ಪ ತಲವಾಯಿ ಹಾಗೂ ಸುರೇಶ ತಲವಾಯಿ ಎಂಬುವವರಿಗೆ ಸೇರಿದ ಎತ್ತುಗಳೇ ಕಳ್ಳತನವಾಗಿವೆ.
ನಿನ್ನೆ ತಡರಾತ್ರಿ 1 ಗಂಟೆಯವರೆಗೂ ಮಾಲೀಕರು ಹೊಲದ ಮನೆಯಲ್ಲೇ ಇದ್ದರು. ಎತ್ತುಗಳನ್ನು ಕಟ್ಟಿ ಮಾಲೀಕರು ವಾಪಸ್ ಮನೆಗೆ ಬಂದ ವೇಳೆ ಕಳ್ಳರು ಎರಡೂ ಎತ್ತುಗಳನ್ನು ಬಿಚ್ಚಿಕೊಂಡು ಪರಾರಿಯಾಗಿದ್ದಾರೆ. ಸುಮಾರು ಒಂದೂವರೆ ಲಕ್ಷ ರೂಪಾಯಿ ಬೆಲೆ ಬಾಳುವ ಎತ್ತುಗಳ ಇವಾಗಿವೆ.
ಸದ್ಯ ಮಾಲೀಕರು ಧಾರವಾಡ ಗ್ರಾಮೀಣ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದಾರೆ.
Kshetra Samachara
11/09/2021 10:35 am