ಹುಬ್ಬಳ್ಳಿ- ನಗರದ ಗದಗ ರಸ್ತೆಯ ರಿಂಗ್ ರೋಡ್ ನ ಸೇತುವೆ ಬಳಿ, ಸುಲಿಗೆಕೋರರ ತಂಡವು ಲಾರಿ ಚಾಲಕನ ಬಳಿಯಿಂದ 21 ಸಾವಿರ. ಮತ್ತು ಮೊಬೈಲ್ ಕಿತ್ತುಕೊಂಡ ಪರಾರಿಯಾದ ಘಟನೆ ತಡರಾತ್ರಿ ನಡೆದಿದೆ.
ಚಾಲಕ ಜಾರ್ಖಂಡ್ ಹಜರೆ ಜಿಲ್ಲೆ ಪಾಟ್ನಾ ತಾಲೂಕು ಮಕೋಲದ ರಾಜಕುಮಾರ ರವಿದಾಸನು, ಶುಭಂ ಟ್ರಾನ್ಸ್‌ಪೋರ್ಟ್ ಕಂಪನಿಯ ಲಾರಿಯಲ್ಲಿ ಗಿಣಿಗೇರಾದಿಂದ ಕಾರವಾರಕ್ಕೆ ಸಿಮೆಂಟ್ ಚೀಲ ತುಂಬಿಕೊಂಡು ಹುಬ್ಬಳ್ಳಿ ಮಾರ್ಗವಾಗಿ ಹೋಗುತ್ತಿದ್ದಾಗ, ರಿಂಗ್ ರಸ್ತೆ ಸೇತುವೆ ಬಳಿಯ ಕ್ರಾಸ್ ಹುಬ್ಬಳ್ಳಿ - ಗದಗ ಕ್ಲೀನರ್ ಬಾಗಿಲಿನಿಂದ ಹತ್ತಿ , ಚಾಲಕನ ಬಳಿಯ ಮೊಬೈಲ್, ಇಬ್ಬರು ಪರ್ಸ್ ಮತ್ತು ಕಿಸೆಯಲ್ಲಿದ್ದ ಹಣ ಕಿತ್ತುಕೊಂಡು ಖದೀಮರು ಪರಾರಿಯಾಗಿದ್ದಾರೆ, ಈ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
19/08/2021 04:53 pm