ಧಾರವಾಡ: ಅನೈತಿಕ ಸಂಬಂಧ ಹೊಂದಿದ್ದ ಪತಿರಾಯನೊಬ್ಬ ತನ್ನ ಪತ್ನಿಯನ್ನೇ ಹತ್ಯೆ ಮಾಡಿರುವ ಘಟನೆ ಧಾರವಾಡದ ರಾಜೀವಗಾಂಧಿನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಶಿಲ್ಪಾ ಶಿರೂರ (26) ಎಂಬ ಗೃಹಿಣಿಯೇ ಹತ್ಯೆಗೀಡಾದವಳು. ಈಕೆಯ ಪತಿ ಗಣೇಶ ಎಂಬಾತ ಬೇರೊಬ್ಬಳ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಈ ವಿಷಯ ಗೊತ್ತಾದ ಕೂಡಲೇ ಶಿಲ್ಪಾ ತನ್ನ ಪತಿ ಗಣೇಶನಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಳು. ಹೀಗಾಗಿ ಆಕೆಯನ್ನು ಹತ್ಯೆ ಮಾಡಿದ ಗಣೇಶ, ತಾನೇ ವಿದ್ಯಾಗಿರಿ ಠಾಣೆಗೆ ಹೋಗಿ ತನ್ನ ಪತ್ನಿಯನ್ನು ಯಾರೋ ಹತ್ಯೆ ಮಾಡಿರುವುದಾಗಿ ದೂರು ಕೊಡಲು ಮುಂದಾಗಿದ್ದ ಎಂಬ ಸ್ವಾರಸ್ಯಕರ ಮಾಹಿತಿ ಬಹಿರಂಗಗೊಂಡಿದೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ವಿದ್ಯಾಗಿರಿ ಠಾಣೆಯಲ್ಲಿ ದೂರು ದಾಖಲಾಗಿದೆ.
Kshetra Samachara
13/08/2021 07:02 pm