ಹುಬ್ಬಳ್ಳಿ: ನಗರದ ಸಬ್ ಜೈಲಿನಿಂದ ಪರಾರಿಯಾಗಿದ್ದ ಕೊಲೆ ಆರೋಪದ ವಿಚಾರಣಾಧೀನ ಖೈದಿ ವಿಜಯಾನಂದ ನರೇಗಲ್, ಅಣ್ಣಿಗೇರಿ ರೈಲ್ವೆ ನಿಲ್ದಾಣ ವ್ಯಾಪ್ತಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2014ರಂದು ವಿಜಯಾನಂದ ಹಾಗೂ ಆತನ ಜೊತೆ ಇನ್ನಿಬ್ಬರು ಸೇರಿ ಕುರಿ ಕದಿಯಲು ಹೋಗಿದ್ದರು. ಈ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸಿದ್ದ ಇಬ್ಬರು ಕುರಿಗಾಹಿಗಳನ್ನು ಆರೋಪಿಗಳು ಕೊಲೆ ಮಾಡಿದ್ದರು.
ಈ ಹಿನ್ನೆಲೆಯಲ್ಲಿ 2014ರಿಂದ ಇಲ್ಲಿನ ಉಪಕಾರಾಗೃದಲ್ಲಿದ್ದ ವಿಜಯಾನಂದ ಆಗಸ್ಟ್ 1ರಂದು ಜೈಲು ಸಿಬ್ಬಂದಿಗೆ ಚಳ್ಳೆಹಣ್ಣು ತಿನಿಸಿ ಪರಾರಿಯಾಗಿದ್ದ. ಹೈಕೋರ್ಟ್ ನಲ್ಲಿ ಹಾಕಿದ್ದ ಬೆಲ್ ವಜಾ ಆದ ಹಿನ್ನೆಲೆಯಲ್ಲಿ ಭಯಗೊಂಡು ತಪ್ಪಿಸಿಕೊಂಡು ಹೋಗಿ ಅಣ್ಣಿಗೇರಿಗೆ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದ. ನಂತರ ಏಕಾಏಕಿ ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು, ರೈಲ್ವೆ ಹಳಿ ಬಳಿ ಶವ ಪತ್ತೆಯಾಗಿದ್ದಾನೆ.
Kshetra Samachara
04/08/2021 09:48 pm