ಧಾರವಾಡ: ಧಾರವಾಡದ ರಿಯಲ್ ಎಸ್ಟೇಟ್ ಉದ್ಯಮಿ ಶ್ರೀನಿವಾಸ ನಾಯ್ಡು ಎಂಬುವವರ ಅಪಹರಣ ಪ್ರಕರಣ ಇದೀಗ ಪ್ರಮುಖ ಟ್ವಿಸ್ಟ್ ಪಡೆದುಕೊಂಡಿದೆ. ಉದ್ಯಮಿಯ ಅಳಿಯನೇ ಕಿಡ್ನ್ಯಾಪ್ ಮಾಡಲು ಯತ್ನಿಸಿದ್ದ ಎಂಬ ಪ್ರಮುಖ ಅಂಶ ಇದೀಗ ಪೊಲೀಸ್ ತನಿಖೆಯಿಂದ ಬಹಿರಂಗಗೊಂಡಿದೆ.
ಉದ್ಯಮಿ ಶ್ರೀನಿವಾಸ ಅವರ ಅಳಿಯ ಪವನ್ ವಾಜಪೇಯಿ, ಅಪಹರಣದ ಪ್ರಮುಖ ಸೂತ್ರದಾರ. ಪವನ್ ಸೇರಿದಂತೆ ಐವರನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ. ನಿನ್ನೆ ರಿಯಲ್ ಎಸ್ಟೇಟ್ ಉದ್ಯಮಿ ಶ್ರೀನಿವಾಸ್ ನಾಯ್ಡು ಅಪಹರಣವಾಗಿತ್ತು. ನಾಯ್ಡು ಜೊತೆಗೆ ಅಳಿಯ ಪವನ್ ಕೂಡ ಸೈಟ್ ನೋಡಲು ಹೋಗಿದ್ದ. ಈ ವೇಳೆ ಅಪರಿಚಿತರು ದಾಳಿ ಮಾಡಿ ಅಪಹರಣ ಮಾಡಿದ್ದರು. ಬಳಿಕ ಪವನ್ ಮನೆಗೆ ಬಂದು ಮಾವನ ಕಿಡ್ನ್ಯಾಪ್ ಸ್ಟೋರಿ ಹೆಣೆದಿದ್ದ ಎನ್ನಲಾಗಿದೆ. ಆರಂಭದಿಂದಲೇ ಅಳಿಯನ ಮೇಲೆ ಪೊಲೀಸರ ಸಂಶಯ ವ್ಯಕ್ತವಾಗಿತ್ತು. ಪೊಲೀಸ್ ತನಿಖೆಯಲ್ಲಿ ಅಳಿಯ ಪವನ್ ಅಪಹರಣದ ಅಸಲಿ ಕಹಾನಿ ಬಿಚ್ಚಿಟ್ಟಿದ್ದಾರೆ. ಪವನ್‌ಗೆ ಕಿಡ್ನ್ಯಾಪ್ ಮಾಡಲು ಸಾಥ್ ನೀಡಿದ ನಾಲ್ವರು ಕೂಡ ಪೊಲೀಸರ ಅತಿಥಿಯಾಗಿದ್ದಾರೆ. ಅಳಿಯ ಪವನ್ ಸೇರಿ ಆಸೀಫ್, ಸಮೀರ್, ಮಂಜುನಾಥ, ಖಲೀಲ್ ಎಂಬುವರು ಶ್ರೀನಿವಾಸ್ ನಾಯ್ಡು ಅವರನ್ನು ಕಿಡ್ನಾಪ್ ಮಾಡಿದ್ದರು. ಇದೀಗ ಐವರನ್ನೂ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ವಿದ್ಯಾಗಿರಿ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.
Kshetra Samachara
31/07/2021 07:45 pm