ಹುಬ್ಬಳ್ಳಿ: ಇನ್‌ಸ್ಟಾಗ್ರಾಮ್‌ನಲ್ಲಿ ಮೊಬೈಲ್ ಪೋನ್ ಮಾರಾಟಕ್ಕೆ ಇದೇ ಎಂದು ಜಾಹೀರಾತು ಹಾಕಿ ಹಣ ಹಾಕಿಸಿಕೊಂಡು ಮೋಸ ಮಾಡುತ್ತಿದ್ದ ಅಂತರ್ ರಾಜ್ಯ ವ್ಯಕ್ತಿಯನ್ನು ಹುಬ್ಬಳ್ಳಿ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಲಾಸನಗರದ ದೇವ್ ಶಂಕರ ಲಾಲವಾನಿ (19 ) ಬಂಧಿತ ವ್ಯಕ್ತಿ. ಆರೋಪಿಯಿಂದ ಕೃತ್ಯಕ್ಕೆ ಉಪಯೋಗಿಸಿದ ಓನ್ ಪ್ಲಸ್ ಕಂಪನಿಯ ಮೊಬೈಲ್ ಪೋನ್ ಜಪ್ತ ಮಾಡಲಾಗಿದೆ.
ಕಳೆದ ವರ್ಷ ಫೆ.20ರಂದು ದೂರುದಾರರು, ''ಆರೋಪಿ ದೇವ್ ಲಾಲವಾನಿ ಇನ್‌ಸ್ಟಾಗ್ರಾಮ್‌ನಲ್ಲಿ ಐ-ಫೋನ್ ಮಾರಾಟಕ್ಕೆ ಇದೆ ಅಂತ ಜಾಹೀರಾತು ಹಾಕಿದ್ದ. ಹೀಗಾಗಿ ಆತನೊಂದಿಗೆ 55 ಸಾವಿರ ರೂಪಾಯಿಗೆ ವ್ಯವಹಾರ ಕುದುರಿಸಿಕೊಂಡು, ಹಣವನ್ನು ಆನ್‌ಲೈನ್ ಮುಖಾಂತರ ವರ್ಗಾವಣೆ ಮಾಡಲಾಗಿತ್ತು. ಆದರೆ ಆರೋಪಿಯು ಐ.ಫೋನ್ ಹ್ಯಾಂಡಸಟ್ ಕಳಿಸದೇ ಕೋರಿಯರ್ ಮುಖಾಂತರ ಸಾದಾ ಕೀ ಪ್ಯಾಡ್ ಹ್ಯಾಂಡಸಟ್ ಅನ್ನು ಕಳಿಸಿ ಮೋಸ ಮಾಡಿದ್ದಾನೆ'' ಎಂದು ತಿಳಿಸಿದ್ದರು.
ಈ ಬಗ್ಗೆ ನೀಡಿದ ದೂರಿನ ಆಧಾರದ ಮೇಲೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು ಕೊನೆಗೂ ಒಂದು ವರ್ಷದ ನಂತರ ಆರೋಪಿ ದೇವ್ ಶಂಕರ್ ಲಾಲವಾನಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Kshetra Samachara
23/02/2021 08:22 am