ಕುಂದಗೋಳ : ಸಾರ್ವಜನಿಕ ಸ್ಥಳದಲ್ಲಿ ತನ್ನ ಸ್ವಂತ ಲಾಭಕೋಸ್ಕರ ಓಸಿ ಬರೆಯುತ್ತಿದ್ದ ವ್ಯಕ್ತಿಯನ್ನು ಗುಡಗೇರಿ ಪೊಲೀಸರು ಕಳೆದ ಶನಿವಾರ ಫೆ.20 ರಂದು ಬಂಧಿಸಿದ್ದು ಬಂಧಿತನಿಂದ 745 ರೂಪಾಯಿ ಹಣ ಹಾಗೂ ಬಾಲ್ ಪೆನ್ ಹಾಗೂ ಓಸಿ ಚೀಟಿ ವಶಪಡಿಸಿಕೊಂಡಿದ್ದಾರೆ.
ಆರೋಪಿ ಕುಂದಗೋಳ ತಾಲೂಕಿನ ಯರೇಬೂದಿಹಾಳ ಗ್ರಾಮದ ಪಕ್ಕೀರಪ್ಪ ನೀಲಪ್ಪ ಸಾಲಮನಿ ಎಂದು ತಿಳಿದು ಬಂದಿದ್ದು ಯರೇಬೂದಿಹಾಳ ಗ್ರಾಮದ ಬಸ್ ನಿಲ್ದಾಣ ಹತ್ತಿರ ಓಸಿ ಬರೆಸಿಕೊಳ್ಳುತ್ತಿದ್ದ ಈತನನ್ನು ಖಚಿತ ಮಾಹಿತಿ ಮೇರೆಗೆ ದಾಳಿ ಬಂಧಿಸಿದ್ದಾರೆ.
ಈ ಪ್ರಕರಣ ಕುರಿತು ಗುಡಗೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
Kshetra Samachara
22/02/2021 02:06 pm