ಧಾರವಾಡ: ಅಪ್ರಾಪ್ತ ಬಾಲಕಿ ಮೇಲೆ ಮೂವರು ಕಾಮುಕರು ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಧಾರವಾಡ ತಾಲ್ಲೂಕಿನ ಕಲ್ಲಾಪೂರ ಗ್ರಾಮದಲ್ಲಿ ನಡೆದಿದೆ.
ನಾಗರಾಜ ಛಬ್ಬಿಯವರ ನೇತೃತ್ವದಲ್ಲಿ ಶಿವಾಜಿ ಜಯಂತಿ ಕಾರ್ಯಕ್ರಮ ಮತ್ತು ರಸಮಂಜರಿ ಕಾರ್ಯಕ್ರಮವನ್ನು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮ ನೋಡಲು ಬಂದಿದ್ದ ಬಾಲಕಿ, ಮರಳಿ ಮನೆಗೆ ಹೋಗುವಾಗ ಮೂವರು ಯುವಕರು ಮನೆಗೆ ಹೊರಟಿದ್ದ ಬಾಲಕಿಯನ್ನು ಮನೆಯೊಂದರಲ್ಲಿ ಎಳೆದುಕೊಂಡು ಹೋಗಿದ್ದಾರೆ. ಅತ್ಯಾಚಾರಕ್ಕೆ ಯತ್ನಿಸಿ ಮಾನ ಭಂಗ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಬಾಲಕಿ ಚಿರಾಡುವ ಧ್ವನಿ ಕೇಳಿದ ಗ್ರಾಮಸ್ಥರು ಕೂಡಲೇ ಹೋಗಿ ಬಾಲಕರಿಗೆ ಬೈದು ಹೊರಗಡೆ ಅಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇತ್ತ ಬಾಲಕಿಯ ಪೋಷಕರು ಧಾರವಾಡ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಮಹಿಳಾ ಪೊಲೀಸ್ ಠಾಣೆಯುವರು ಮಂಜು, ಸುನೀಲ, ಫಕೀರ ಮೂವರನ್ನು ಬಂಧನ ಮಾಡಿದ್ದಾರೆ.
Kshetra Samachara
20/02/2021 11:12 pm