ಧಾರವಾಡ: ಬೆಳಿಗ್ಗೆ ಮನೆಯಿಂದ ಹೋದ ಮಹಿಳೆಯೊಬ್ಬರು ಸಂಜೆ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಧಾರವಾಡದ ಮಾಳಮಡ್ಡಿ ಬಡಾವಣೆಯಲ್ಲಿ ನಡೆದಿದೆ.
ಮಾಳಮಡ್ಡಿಯ ವನಮಾಲಾ ಕುಲಕರ್ಣಿ (50) ಎಂಬ ಮಹಿಳೆ ಬೆಳಿಗ್ಗೆ ಮನೆಯಿಂದ ಹೊರಹೋಗಿದ್ದರು. ಸಂಜೆಯಾದರೂ ಮನೆಗೆ ಬಾರದೇ ಇದ್ದಿದ್ದರಿಂದ ಗಾಬರಿಯಾದ ಮನೆಯವರು ಹುಡುಕಾಟ ನಡೆಸಿ ಕೊನೆಗೆ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿದ್ದಾರೆ ಎಂದು ದೂರು ದಾಖಲು ಮಾಡಿದ್ದರು.
ಅದೇ ಮಾರ್ಗವಾಗಿ ಬರುತ್ತಿದ್ದ ಶಾಲಾ ವಿದ್ಯಾರ್ಥಿ ಮಂಜುನಾಥ ಎಂಬಾತ ಕುತೂಹಲದಿಂದ ಬಾವಿಯಲ್ಲಿ ಇಣುಕಿ ನೋಡಿದಾಗ 50 ಅಡಿ ಆಳದ ಬಾವಿಯಲ್ಲಿ ವೃದ್ಧೆ ಬಾವಿಯಲ್ಲಿ ಬಿದ್ದಿದ್ದನ್ನು ನೋಡಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾನೆ. ಕೂಡಲೇ ಸ್ಥಳೀಯರು ಪೊಲೀಸರು ಹಾಗೂ ಅಗ್ನಿಶಾಮಕ ದಳದವರನ್ನು ಸ್ಥಳಕ್ಕೆ ಕರೆಯಿಸಿ ಮಹಿಳೆಯನ್ನು ಮೇಲೆ ಎತ್ತುವ ಕೆಲಸ ಮಾಡಿದ್ದಾರೆ. ಸದ್ಯ ಮಹಿಳೆ ಆರೋಗ್ಯವಾಗಿದ್ದು, ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಮಹಿಳೆ ಬಾವಿಯಲ್ಲಿ ಉದ್ದೇಶಪೂರ್ವಕವಾಗಿ ಬಿದ್ದಿದ್ದಾಳೋ ಅಥವಾ ಆಕಸ್ಮಿಕವಾಗಿ ಬಾವಿಯಲ್ಲಿ ಬಿದ್ದಿದ್ದಾಳೋ ಎಂಬುದು ಆ ಮಹಿಳೆಯಿಂದಲೇ ಗೊತ್ತಾಗಬೇಕಿದೆ.
Kshetra Samachara
09/02/2021 09:19 pm