ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ- ಕಾರು ಅಡ್ಡಗಟ್ಟಿ ಸರಗಳ್ಳತನ ಮಾಡಿದ ದರೋಡೆಕೋರರು

ಹುಬ್ಬಳ್ಳಿ- ಸ್ಕೂಟಿಯಲ್ಲಿ ಬಂದ ಮೂವರು ಕಾರೊಂದನ್ನು ಅಡ್ಡಗಟ್ಟಿ ಸರಗಳ್ಳತನ ಮಾಡಿಕೊಂಡು ಪರಾರಿಯಾದ ಘಟನೆ ಹುಬ್ಬಳ್ಳಿಯ

ಹೊರವಲಯದ ರಿಲಾಯನ್ಸ್ ಫ್ರೆಶ್ ಶಾಪ್ ಬಳಿಯಲ್ಲಿ ನಡೆದಿದೆ.

ಡಿಯೋ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಮೂವರು ಪೆಟ್ರೋಲ್ ಬಂಕ್ ಕೇಳುವ ನೆಪ ಮಾಡಿ ಮೊದಲು ಕಾರನ್ನ ಅಡ್ಡಗಟ್ಟಿದ್ದಾರೆ. ಆಗ ಕಿಡಕಿಯಿಂದ ಮಾತನಾಡುತ್ತಿದ್ದ ಹಾಗೇ ಚಿನ್ನದ ಸರವನ್ನ ದೋಚಿ ಪರಾರಿಯಾಗಿದ್ದಾರೆ. ಅಷ್ಟೇ ಅಲ್ಲ, ಚಾಕುವನ್ನ ತೋರಿಸಿ ಹಣವನ್ನ ಕೇಳಿದ್ದಾರೆ. ತಮ್ಮಲ್ಲಿದ್ದ ಮೂವತ್ತು ರೂಪಾಯಿಗಳನ್ನು ಕಾರಿನಲ್ಲಿದ್ದ ರಾಜು ಶ್ರೀಪತಿರಾವ ಅವರು ಕೊಟ್ಟಿದ್ದಾರೆ.

ಚಿನ್ನದ ಸರವನ್ನ ಎಗರಿಸಿ ಪರಾರಿಯಾಗಿರುವ ಮೂವರು ಶಹರದೊಳಗೆ ಬಂದಿರಬಹುದೆಂದು ಶಂಕಿಸಲಾಗಿದ್ದು, ದ್ವಿಚಕ್ರ ವಾಹನದ ಬಣ್ಣದಿಂದ ಪತ್ತೆ ಹಚ್ಚಲು ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.

ಹಿಂದಿಯಲ್ಲಿ ಮಾತನಾಡುತ್ತಿದ್ದ ಮೂವರು ಯಾರಿಗಾದರೂ ಹೇಳಿದರೇ ಚಾಕು ಹಾಕುವುದಾಗಿ ಬೆದರಿಕೆ ಹಾಕಿದರು. ಹಾಗಾಗಿ ನಾವೂ ಯಾರಿಗೂ ಹೇಳಿಲ್ಲ ಎಂದು ದರೋಡೆಗೆ ಒಳಗಾದ ರಾಜು ಕುಲಕರ್ಣಿ ಅವರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದು, ನಗರದಲ್ಲಿ ನಾಕಾ ಬಂದಿ ಹಾಕಲಾಗಿದೆ.

Edited By : Manjunath H D
Kshetra Samachara

Kshetra Samachara

05/02/2021 09:27 pm

Cinque Terre

111.11 K

Cinque Terre

8

ಸಂಬಂಧಿತ ಸುದ್ದಿ