ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕರ್ತವ್ಯನಿರತ ಸ್ಟಾಫ್ ನರ್ಸ್ ಮೇಲೆ ಹಲ್ಲೆಗೈದ ಪತಿ

ಧಾರವಾಡ: ಕರ್ತವ್ಯ ನಿರತ ಸ್ಟಾಫ್ ನರ್ಸ್ ಮೇಲೆ ಆಕೆಯ ಪತಿಯೇ ಹಲ್ಲೆ ಮಾಡಿದ ಘಟನೆ ತಾಲೂಕಿನ ಅಮ್ಮಿನಭಾವಿ ಗ್ರಾಮದಲ್ಲಿ ನಡೆದಿದೆ‌.

ಅಮ್ಮಿನಭಾವಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಟಾಫ್ ನರ್ಸ್ ಆಗಿರುವ ಪದ್ಮಾವತಿ ಮಂಜುನಾಥ ಮಾಳಗಿ ಎಂಬುವರೇ ಹಲ್ಲೆಗೊಳಗಾದ ಮಹಿಳೆ. ಭಾನುವಾರ ಪದ್ಮಾವತಿ ಅವರು ರಾತ್ರಿ ಪಾಳಿ ಕರ್ತವ್ಯದಲ್ಲಿದ್ದಾಗ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನುಗ್ಗಿದ ಅವರ ಪತಿ ಮಂಜುನಾಥ್ ಮಾಳಗಿ, ಕುಡಿಯಲು ಹಣ ಕೊಡುವಂತೆ ಪೀಡಿಸಿದ್ದಾನೆ. ಇದಕ್ಕೆ ನಿರಾಕರಿಸಿದ ಪತ್ನಿ ಪದ್ಮಾವತಿ ಅವರ ಮೇಲೆ ಗ್ಲಾಸ್‌ನಿಂದ ಹಲ್ಲೆ ಮಾಡಿದ್ದಾನೆ.‌ ಹಾಗೂ ಆರೋಗ್ಯ ಕೇಂದ್ರದ ವೈದ್ಯಕೀಯ ಉಪಕರಣಗಳ ನಾಶಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡ ಪದ್ಮಾವತಿ ಅವರನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Edited By : Vijay Kumar
Kshetra Samachara

Kshetra Samachara

01/02/2021 09:46 am

Cinque Terre

50.03 K

Cinque Terre

0

ಸಂಬಂಧಿತ ಸುದ್ದಿ