ಹುಬ್ಬಳ್ಳಿ: ದಿನ ಬೆಳಗಾದ್ರೆ ಸಾಕು ಒಂದಲ್ಲ ಒಂದು ಹೊಸ ಕಂಪನಿಗಳು ಜನರಿಗೆ ಮಂಕು ಬೂದಿ ಎರಚಿ ಮೋಸ ಮಾಡೋದನ್ನ ನೊಡ್ತಿವಿ. ಈಗ ಇಂತಹದ್ದೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ವಾಣಿಜ್ಯ ಮಳಿಗೆಗಳನ್ನ ಕಟ್ಟಿಸಿ ಕೊಡುವುದಾಗಿ ಹೇಳಿ, ಕೋಟಿ ಕೋಟಿ ಹಣವನ್ನ ಬಿಲ್ಡರ್ ವಂಚಿಸಿದ್ದು, ಹಣ ಕೊಟ್ಟವರು ಈಗ ಬಿದಿಯಲ್ಲಿದ್ದಾರೆ, ಬಿಲ್ಡರ್ ಹಣದ ಮೊಸದ ಜಾಲಕ್ಕೆ ಸಿಲುಕಿದ ಜನರ ಕಂಪ್ಲೀಟ್ ವರದಿ ಇಲ್ಲಿದೆ ನೋಡಿ....
ಹೀಗೆ ಗುಂಪು ಗುಂಪಾಗಿ ಸೇರಿದ ಜನರು. ಜೀವನವೆ ಸಾಕು ಎಂದು ಬದುಕಿಗೆ ಪುಲ್ ಸ್ಟಾಪ್ ಈಡಲು ಮುಂದಾದ ಜನ. ಇವೆರೆಲ್ಲ ಹೀಗೆ ಬೀದಿಯಲ್ಲಿ ನಿಂತು ಕಣ್ಣೀರು ಹಾಕಲು ಕಾರಣವಾಗಿದ್ದು ಮಾತ್ರ ಪತ್ರಿಕೆಯಲ್ಲಿ ಬಂದ ಆ ಜಾಹಿರಾತು. ಅಷ್ಟಕ್ಕು ವಾಣಿಜ್ಯ ನಗರಿ ಹುಬ್ಬಳ್ಳಿ ಜನರಿಗೆ ಪತ್ರಿಕೆಯಲ್ಲಿ ಬಂದ ಆ ಒಂದು ಜಾಹೀರಾತು ಶಾಕ್ ನೀಡಿತ್ತು.
ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಸೆಂಟ್ರಲ್ ಮಾಲ್ ವಾಣಿಜ್ಯ ಮಳಿಗೆ ಕಟ್ಟಡವನ್ನ ಹರಾಜು ಹಾಕುವುದಾಗಿ ಕೆ ಎಸ್ ಎಪ್ ಸಿ ಯಿಂದ ಜಾಹೀರಾತು ನೀಡಲಾಗಿತ್ತು. ಈ ಜಾಹೀರಾತು ನೋಡಿದ 200 ನೂರಕ್ಕು ಹೆಚ್ಚು ಜನರು ಬೀದಿಗೆ ಬಂದಿದ್ದಾರೆ. ಇವರೆಲ್ಲ 2010-12 ರಲ್ಲಿ ಸೆಂಟ್ರಲ್ ಮಾಲ್ ವಾಣಿಜ್ಯ ಮಳಿಗೆ ಕಟ್ಟಡದ ಮಾಲೀಕ ವಿಜಯ ಕಬಾಡೆ ಬೀಸಿದ ಮೊಸದ ಜಾಲಕ್ಕೆ ಬಲಿಯಾದವರು. ವಾಣಿಜ್ಯ ಮಳಿಗೆಗಳನ್ನ ಕಟ್ಟಿಸಿ ಕೊಡುವುದಾಗಿ ಹೇಳಿ, ವಿಜಯ ಕಬಾಡೆ ಅಂದು ಎರಡು ನೂರು ರೂಪಾಯಿ ಬಾಂಡ್ ಮೇಲೆ ಒಪ್ಪಂದ ಮಾಡಿಕೊಂಡು ಹಣ ವಸೂಲಿ ಮಾಡಿದ್ದ. 200 ನೂರಕ್ಕೂ ಹೆಚ್ಚು ಜನರಿಂದ 20 ಕೋಟಿಗೂ ಹೆಚ್ಚಿನ ಹಣ ಸುಲಿಗೆ ಮಾಡಿದ್ದ.
ಇನ್ನು ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವ ಮೊದಲೆ ಇನ್ ಸ್ಟಾಲ್ ಮೆಂಟ್ ಮೇಲೆ ಆತ ಜನರಿಂದ ಹಣ ವಸೂಲಿ ಮಾಡಿದ್ದ. ಆದ್ರೆ ಇವತ್ತಿಗೂ ಹಣ ಕೊಟ್ಟವರಿಗೆ ವಾಣಿಜ್ಯ ಮಳಿಗೆಗಳನ್ನ ಕಟ್ಟಿಸಿಕೊಟ್ಟಿಲ್ಲ. ಆದ್ರೆ ಹಣ ಕೊಟ್ಟ ವಾಣಿಜ್ಯ ಮಳಿಗೆಗಳೆ ಇಂದು ಹರಾಜಿಗೆ ಬಂದಿರೋದು ನೋಡಿ ಎಲ್ಲರು ಶಾಕ್ ಆಗಿದ್ದಾರೆ
ಮುಂದಿನ ಬದುಕಿಗೆ ಆಸರೆ ಆಗುತ್ತೆ ಅಂತಾ ಈ ಬಿಲ್ಡರ್ ನ ನಂಬಿ, ಜನರು ಅಂದು ವಾಣಿಜ್ಯ ಮಳಿಗೆಗಳಿಗಾಗಿ ಹಣ ಕೊಟ್ಟಿದ್ದರು. ಆದ್ರೆ ಬಿಲ್ಡರ್ ಹಣದ ಮೊಸದ ಬಲೆಗೆ ಸಿಲುಕಿದ ಇವರು ಇಂದು ಬೀದಿಗೆ ಬಂದಿದ್ದಾರೆ. ಜನರಿಂದ 2010-12 ರಲ್ಲಿ 20 ಕೋಟಿಗು ಹೆಚ್ಚಿನ ಹಣ ವಸೂಲಿ ಮಾಡಿದ ಬಿಲ್ಡರ್, 2015 ರಲ್ಲಿ ಕೆ.ಎಸ್.ಎಪ್ ಸಿ ಯಿಂದ 5 ಕೋಟಿ ರೂಪಾಯಿ ಇದೆ ಕಟ್ಟಡಕ್ಕಾಗಿ ಸಾಲ ಪಡೆಯುತ್ತಾನೆ.
ದುರಂತ ಅಂದ್ರೆ ಇಷ್ಟೆಲ್ಲ ಜನರು ಹಣ ಹೂಡಿಕೆ ಮಾಡಿರುವ ಸಂಗತಿ ಕೆ ಎಸ್ ಎಪ್ ಸಿಗೆ ಗೊತ್ತಿದ್ದು ಸಾಲ ನೀಡುತ್ತಾರೆ. ಬಿಲ್ಡರ್ ಸಾಲ ಮರು ಪಾವತಿ ಮಾಡದಿದ್ದಾಗ ಈಗ ಕರ್ನಾಟಕ ರಾಜ್ಯ ಹಣಕಾಸು ನಿಗಮದ ಅಧಿಕಾರಿಗಳು ವಾಣಿಜ್ಯ ಮಳಿಗೆ ಕಟ್ಟಡವನ್ನ ಹರಾಜಿಗೆ ಕರೆದಿದ್ದಾರೆ. ಕೆ ಎಸ್ ಎಪ್ ಸಿ ಅಧಿಕಾರಿಗಳು ಈ ವಾಣಿಜ್ಯ ಮಳಿಗೆ ಕಟ್ಟಡದ ಬಿಲ್ಡರ್ ಜೊತೆಗೆ ಶಾಮೀಲಾಗಿ ತಮಗೆ ಮೋಸ ಮಾಡುತ್ತಿದ್ದಾರೆಂದು ಜನರು ಆರೋಪಿಸುತ್ತಿದ್ದಾರೆ.
ವಾಣಿಜ್ಯ ಮಳಿಗೆ ಕಟ್ಟಿಸಿ ಕೊಡುವುದಾಗಿ ಬಿಲ್ಡರ್ ಹಣದ ಮೊಸದ ಜಾಲದಲ್ಲಿ ಸಿಲುಕಿ ಹುಬ್ಬಳ್ಳಿ ಜನರು ಈಗ ಬೀದಿಗೆ ಬಂದಿದ್ದಾರೆ. ಕೋಟಿ ಕೋಟಿ ಹಣ ವಸೂಲಿ ಮಾಡಿದ ಬಿಲ್ಡರ್ ನಾಪತ್ತೆಯಾಗಿದ್ದು, ಹಣ ಕೊಟ್ಟವರು ಕಣ್ಣೀರು ಹಾಕುತ್ತಿದ್ದಾರೆ. ಮತ್ತೊಂದೆಡೆ ಈ ಪ್ರಕರಣದಲ್ಲಿ ಕರ್ನಾಟಕ ರಾಜ್ಯ ಹಣಕಾಸು ನಿಗಮದ ಅಧಿಕಾರಿಗಳ ನಡೆಯು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ....
Kshetra Samachara
25/01/2021 01:47 pm