ಹುಬ್ಬಳ್ಳಿ: ಆತ ಮೂರು ಮಕ್ಕಳ ತಂದೆ. ಹೆಂಡತಿ ಮತ್ತು ಮಕ್ಕಳೊಂದಿಗೆ ಸುಖವಾದ ಸಂಸಾರ ನಡೆಸುತ್ತಿದ್ದ.ಆದ್ರೇ ಅದ್ಯಾವ ಕೆಟ್ಟು ಕಣ್ಣು ಆ ಕುಟುಂಬದ ಮೇಲೆ ಬಿತ್ತೋ ಗೊತ್ತಿಲ್ಲ. ಈ ಕುಟುಂಬ ಈಗ ಮನೆಯ ಯಜಮಾನನ್ನು ಕಳೆದುಕೊಂಡು ಅನಾಥವಾಗಿದೆ.ಅಷ್ಟಕ್ಕೂ ಅಲ್ಲಿ ಆಗಿದ್ದಾದರೂ ಏನು ಅಂತೀರಾ ಈ ಸ್ಟೋ ನೋಡಿ..
ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮತ್ತೇ ನೆತ್ತರು ಹರಿದಿದೆ.ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿರುವ ಘಟನೆಯೊಂದು ಹುಬ್ಬಳ್ಳಿ ಗಿರಣಿಚಾಳ ಬಳಿ ತಡರಾತ್ರಿ ನಡೆದಿದೆ.ಹೌದು..ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನ ಕೊಲೆ ಮಾಡಲಾಗಿದ್ದು,ರವಿ ಮುದ್ದಿನಕೇರಿ ಎಂಬ ವ್ಯಕ್ತಿಯ ಕೊಲೆಯಾಗಿದ್ದಾನೆ.ಹುಬ್ಬಳ್ಳಿಯ ಗಿರಣಿಚಾಳ ನಿವಾಸಿಯಾಗಿರುವ ರವಿ ರಾತ್ರಿ ಊಟ ಮುಗಿಸಿಕೊಂಡ ಹೊರ ಹೋದ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ವಿಜಯ ಆಲೂರ ಎಂಬ ವ್ಯಕ್ತಿಯಿಂದ ಕೊಲೆ ಮಾಡಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ.
ಊಟ ಮುಗಿಸಿಕೊಂಡು ಹೊರಗೆ ಹೋದ ರವಿಯ ಎದೆಗೆ ಒದ್ದು ಗಾಯಗೊಳಿಸಿದ್ದ ವಿಜಯ ರಾತ್ರಿ ಎದೆಗೆ ಒದ್ದು ಮನಸೋ ಇಚ್ಚೆ ಥಳಿಸಿದ್ದಾನೆ. ಸ್ನೇಹಿತರ ಜೊತೆಗೆ ಬಂದ ವಿಜಯ ಕೊಲೆ ಮಾಡಿದ್ದಾನೆ ಎಂಬುವುದು ಕುಟುಂಬಸ್ಥರ ಆರೋಪವಾಗಿದೆ.ಇಬ್ಬರ ನಡುವೆ ಮರಳಿನ ದಂಧೆ ವಿಷಯವಾಗಿ ಜಗಳ ನಡೆದಿರುವ ಶಂಕೆ ವ್ಯಕ್ತವಾಗಿದ್ದು,ತೀವ್ರವಾಗಿ ಗಾಯಗೊಂಡಿದ್ದ ರವಿ ಕಿಮ್ಸ್ ಗೆ ದಾಖಲಾಗಿದ್ದ ಆದ್ರೇ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ರವಿ ಮೃತಪಟ್ಟಿದ್ದಾನೆ.ಇನ್ನೂ ಕೊಲೆ ಮಾಡಿದ ವಿಜಯ ಪರಾರಿಯಾಗಿದ್ದ ಈ ಕುರಿತು ಬಲೆ ಬೀಸಿದ ಪೊಲೀಸರು ಕೊಲೆ ಆರೋಪಿಯನ್ನು ಬಂಧಿಸಿದ್ದಾರೆ.
ಇನ್ನೂ ಈ ಕುರಿತು ಪ್ರಕರಣ ದಾಖಲಿಸಿಕೊಂಡ ಉಪನಗರ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಕೊಲೆಗೆ ಕಾರಣ ತನಿಖೆಯ ನಂತರವೇ ತಿಳಿದು ಬರಲಿದೆ.ಒಟ್ಟಿನಲ್ಲಿ ಗಂಡನನ್ನು ಕಳೆದುಕೊಂಡ ಹೆಂಡತಿ,ತಂದೆಯನ್ನು ಕಳೆದುಕೊಂಡ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ.
Kshetra Samachara
20/01/2021 04:43 pm