ಅಣ್ಣಿಗೇರಿ : ಪಟ್ಟಣದ ಕೆಲ ಓಣಿಗಳಲ್ಲಿ ತಮ್ಮ ಮನೆ ಹಾಗೂ ಹಿತ್ತಲಿನಲ್ಲಿ ನಿಲ್ಲಿಸಿದ ಟ್ಯಾಕ್ಟರ ಟೇಲರಗಳು ಮತ್ತು ಕೆಲ ಬಿಡಿ ಭಾಗಗಳು ಕಣ್ಮರೆಯಾಗುತ್ತಿರುವ ಘಟನೆ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.
ಸ್ಥಳೀಯ ನಿವಾಸಿ ಶೇಖಣ್ಣ ಸೊಟಕನಾಳ ಎಂಬುವವರಿಗೆ ಸೇರಿದ ನೂತನ ಟ್ಯಾಕ್ಟರ್ ಟೇಲರ್ ಹಾಗೂ ಅದರಲ್ಲಿದ್ದ 40 ಚೀಲ ಸಿಮೆಂಟ್ ಚೀಲಗಳು ಮಂಗಳವಾರ ರಾತ್ರಿ ಕಳ್ಳರ ಪಾಲಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದೇಶಪಾಂಡೆ ನಗರದ ಕೆಲ ಮನೆಗಳ ಮುಂದೆ ನಿಲ್ಲಿಸಿದ ಟ್ಯಾಕ್ಟರ ಇಂಜಿನಗೆ ಅಳವಡಿಸಿದ ಧ್ವನಿವರ್ಧಕ ಹಾಗೂ ಹುಡಗಳು ನಾಪತ್ತೆಯಾದ ಘಟನೆ ನಡೆಯುತ್ತಿದೆ. ಒಟ್ಟಾರೆ ರೈತ ಕುಲಕ್ಕೆ ಸಂಕಷ್ಟದ ಕಾಲದಲ್ಲಿ ಮತ್ತೊಂದು ಆತಂಕ ಎದುರಾದಂತಾಗಿದೆ.
Kshetra Samachara
15/01/2021 11:00 am