ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಶಾಸಕ ನಿಂಬಣ್ಣವರ ಪುತ್ರನ ಕಾರಿನ ‌ಮೇಲೆ ಕಲ್ಲು ಎಸೆದು ದಾಳಿ

ಕಲಘಟಗಿ:ಶಾಸಕ ಸಿ ಎಂ ನಿಂಬಣ್ಣವರ ಪುತ್ರ ಬಿಜೆಪಿ ಮುಖಂಡರಾಗಿರುವ ಶಶಿಧರ ನಿಂಬಣ್ಣವರ ಕಾರಿನ ಮೇಲೆ ರಾತ್ರಿ ವೇಳೆ ಕಲ್ಲಿನಿಂದ ಸಂಬಂಧಿಕರೇ ದಾಳಿ‌ ಮಾಡಿರುವ ಘಟನೆ ಜರುಗಿದೆ.

ಶನಿವಾರ ರಾತ್ರಿ ಶಶಿಧರ ನಿಂಬಣ್ಣವರ ಹಾಗೂ ನಾಗರಾಜ ಹನುಮಂತಪ್ಪ ನಿಂಬಣ್ಣವರ,ರಾಜೇಂದ್ರ ಸುರೇಶ ಜಾಯನಗೌಡರ ಸೇರಿ,ಸಂಗೆದೇವರಕೊಪ್ಪ ಹೊಲಕ್ಕೆ ಹೋಗಿ ಮನೆಗೆ ‌ಮಾರುತಿ 800 ಕಾರಿನಲ್ಲಿ‌ ಬರುವಾಗ,

ನೀರಿನ ಟ್ಯಾಂಕ್ ಹತ್ತಿರ ಅಡ್ಡಗಟ್ಟಿ,ಜಮೀನಿನ ವಿಚಾರವಾಗಿ ಇದ್ದ ತಂಟೆಯ ಸಿಟ್ಟಿನಿಂದ,

ಕಲ್ಲಿನಿಂದ ಕಾರಿನ ಗ್ಲಾಸ್ ಒಡೆದು ಹಾನಿ,‌ಮಾಡಿ ಜೀವ ಬೆದರಿಕೆ ಹಾಕಲಾಗಿದೆ.ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ.

ಈ‌ ಕುರಿತು ನಾಗರಾಜ ಹನುಮಂತಪ್ಪ ನಿಂಬಣ್ಣವರ ಪೊಲೀಸ್ ಠಾಣೆಯಲ್ಲಿ ಸಂಗೆದೇವರಕೊಪ್ಪ ಗ್ರಾಮದ

ಶಂಕ್ರಪ್ಪ ಹನುಮಂತಪ್ಪ ನಿಂಬಣ್ಣವರ,ಮಹಾಂತೇಶ ಹನುಮಂತಪ್ಪ ‌ನಿಂಬಣ್ಣವರ ಹಾಗೂ ಸಂಗಮೇಶ ಹನುಮಂತಪ್ಪ ನಿಂಬಣ್ಣವರ ಇವರುಗಳ ಮೇಲೆ ದೂರು ನೀಡಿದ್ದಾರೆ.ಸಿ ಪಿ ಐ ವಿಜಯ ಬಿರಾದಾರ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

03/01/2021 05:09 pm

Cinque Terre

99.03 K

Cinque Terre

3

ಸಂಬಂಧಿತ ಸುದ್ದಿ