ಹುಬ್ಬಳ್ಳಿ: ನಾಲ್ಕು ಹೆಣ್ಣು ಮಕ್ಕಳು ಆಗಿದ್ದಾರೆ ಗಂಡು ಮಕ್ಕಳಾಗಲಿಲ್ಲ ಎಂದು ಮನ ನೊಂದಕೊಂಡ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ತಾರಿಹಾಳ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ದಾವಲಸಾಬ್ ಪೆಂಡಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ. ವೃತ್ತಿಯಲ್ಲಿ ಕೂಲಿ ಕೆಲಸ ಮಾಡುತ್ತಿರುವ ದಾವಲ್ ಸಾಬ್ ಗೆ ನಾಲ್ಕು ಹೆಣ್ಣು ಮಕ್ಕಳಿದ್ದರೂ ಗಂಡು ಮಕ್ಕಳಾಗಿಲ್ಲ ಎಂದು ಪದೇ ಪದೇ ಹೆಂಡತಿಯ ಜೊತೆಯಲ್ಲಿ ಆಗಾಗ್ಗೆ ಜಗಳವನ್ನು ಮಾಡ್ತಾ ಇದ್ದನು.
ಇದೇ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡಿದ್ದು ದಾವಲ್ ಸಾಬ್ ನಿನ್ನೇ ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿಕೊಂಡ ಸಮಯದಲ್ಲಿ ತಾನು ಮಲಗಿದ್ದ ಕೋಣೆಯಲ್ಲಿ ಚೀಲಕವನ್ನು ಹಾಕಿಕೊಂಡು ಸರಾಯಿ ಕುಡಿದ ಮತ್ತಿನಲ್ಲಿ ನೇಣು ಬಿಗಿದುಕೊಂಡ ದಾವಲ್ ಸಾಬ್ ಸಾವಿಗೆ ಶರಣಾಗಿದ್ದಾನೆ.
ಹೆಂಡತಿಯ ವೇಲ್ ನಿಂದ ಕುತ್ತಿಗೆಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತಂತೆ ಹೆಂಡತಿ ಕಲುಸಂಬಿ ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇನ್ನೂ ಸುದ್ದಿ ತಿಳಿದ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ಮಾಡಿದರು. ಸದ್ಯ ದೂರು ದಾಖಲು ಮಾಡಿಕೊಂಡಿದ್ದಾರೆ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು.ಇನ್ನೂ ಇವೆಲ್ಲದರ ನಡುವೆ ನಾಲ್ಕು ಹೆಣ್ಣು ಮಕ್ಕಳು ಹೆಂಡತಿಯನ್ನು ಅನಾಥ ಮಾಡಿ ಆತ್ಮಹತ್ಯೆ ಮಾಡಿಕೊಂಡು ಸಾವಿಗೆ ಶರಣಾಗಿ ಇಡೀ ಕುಟುಂಬವನ್ನು ಬಿಟ್ಟು ದಾವಲ್ ಸಾಬ್ ಬಾರದ ಲೋಕಕ್ಕೆ ಹೋಗಿದ್ದು, ಕುಟುಂಬದ ಪರಸ್ಥಿತಿಯನ್ನಾದರೂ ಅರಿತುಕೊಂಡು ಜವಾಬ್ದಾರಿಯಿಂದ ಬದುಕಬೇಕಾಗಿದ್ದ ದಾವಲ್ ಸಾಬನ ಸಾವಿನಿಂದಾಗಿ ಪೆಂಡಾರಿ ಕುಟುಂಬ ಅತಂತ್ರವಾಗಿದೆ.
Kshetra Samachara
29/12/2020 10:03 am