ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ದೀಪಕ ಪಟದಾರಿ ಕೊಲೆಯಾದ ಮೂರು ತಿಂಗಳ ನಂತರ ಪ್ರಮುಖ ಆರೋಪಿಗಳ ಬಂಧನ

ಹುಬ್ಬಳ್ಳಿ: ಗ್ರಾಮ ಪಂಚಾಯತಿ ಸದಸ್ಯ ದೀಪಕ ಪಟದಾರಿ ಕೊಲೆಯ ಪ್ರಮುಖ ಆರೋಪಿಗಳನ್ನು ಬಂಧನ ಮಾಡುವಲ್ಲಿ ಹುಬ್ಬಳ್ಳಿಯ ಪೊಲೀಸರು ಯಶಸ್ವಿಯಾಗಿದ್ದಾರೆ,ಕಳೆದ ಮೂರು ತಿಂಗಳ ಹಿಂದೆ ರಾಯನಾಳ ಗ್ರಾಮದಲ್ಲಿ ದೀಪಕ ಪಟದಾರಿಯನ್ನು ಬರ್ಬರವಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.

ಈ ಹಿನ್ನೆಲೆ ಕೊಲೆಯಾದ ದೀಪಕ ಪಟದಾರಿ ಸೋದರ ಸಂಜಯ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಮೇಟಿ ಕುಟುಂಬದ ಕೆಲವು ಜನರ ಮೇಲೆ ದೂರನ್ನು ನೀಡಿದ್ದ,ಆದ್ರೆ ಪೊಲೀಸರು ಮಾತ್ರ ದೂರು ತೆಗೆದುಕೊಂಡು ಪ್ರಮುಖ ಆರೋಪಿಗಳನ್ನು ಬಂದನ ಮಾಡಿರಲಿಲ್ಲ,ಈ ಹಿನ್ನೆಲೆಯಲ್ಲಿ ಪೊಲೀಸರ ವಿರುದ್ಧ ಸಂಜಯ ಪಟದಾರಿ ಪ್ರತಿಭಟನೆ, ಹಾಗೂ ಪತ್ರಿಕಾಗೋಷ್ಠಿ ನಡೆಸಿ ಸರ್ಕಾರದ ಗಮನಕ್ಕೆ ಈ ಪ್ರಕರಣ ತಂದು ಸಿಐಡಿ ಹಸ್ತಾಂತರ ಆಗಿತ್ತು.

ಈ ಎಲ್ಲ ಬೆಳವಣಿಗೆಗಳ ನಡುವೆ ದೀಪಕ ಪಟದಾರಿ ಪತ್ನಿ ಪುಷ್ಪಾ ಪಟದಾರಿ ನನ್ನ ಗಂಡನ ಸಾವಿಗೆ ನ್ಯಾಯ ಕೊಡಿಸುವಲ್ಲಿ ಪೊಲೀಸರು ವಿಫಲರಾಗಿದ್ದು,ಎಂದು ಡೆತ್ ನೋಟ್ ನಲ್ಲಿ ಯಲ್ಲಪ್ಪ, ರುದ್ರಪ್ಪ, ಹಾಗೂ ಇನ್ನು ಕೆಲವರ ಹೆಸರು ಬರೆದಿಟ್ಟು ಈ ದುಷ್ಟ ಸರ್ಕಾರದಲ್ಲಿ ನನಗೆ ಬದುಕಲು ಇಷ್ಟವಿಲ್ಲ ಎಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕಮೀಷನರ್ ಲಾಬುರಾಮ್ ಕಳೆದ ಮೂರು ತಿಂಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಗಳನ್ನು ಪತ್ತೆ ಮಾಡಲು ವಿಶೇಷ ತಂಡ ರಚನೆ ಮಾಡಲಾಗಿತ್ತು, ಇದೀಗ ಹರಿಹರದಲ್ಲಿ ಪ್ರಮುಖ ಆರೋಪಿಗಳಾದ ಯಲ್ಲಪ್ಪ ಹಾಗೂ ರುದ್ರಪ್ಪ ನನ್ನು ಬಂಧನ ಮಾಡಿದ್ದು ,ಪುಷ್ಪಾ ಪಟದಾರಿ ಸಾವಿನ ನಂತರ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಂತಾಗಿದೆ.

Edited By : Abhishek Kamoji
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

07/10/2022 11:02 am

Cinque Terre

97.51 K

Cinque Terre

6

ಸಂಬಂಧಿತ ಸುದ್ದಿ