ಹುಬ್ಬಳ್ಳಿ: ಅವಳಿನಗರದಲ್ಲಿ ಆಗಾಗ ಕಾಣಸಿಗುವ ಗಾಂಜಾ ವಿರುದ್ಧ ಪೊಲೀಸರು ಇನ್ನಿಲ್ಲದ ಸಮರ ಸಾರಿದ್ದಾರೆ. ಹೌದು ಇದೀಗ ಆಗಸ್ಟ್ 15ರ ನಡುವೆಯೇ ಗಾಂಜಾ ಸಾಗಿಸಲು ಯತ್ನಿಸಿದ್ದ ಆರೋಪಿಯನ್ನ ಹುಬ್ಬಳ್ಳಿ CEN ಪೊಲೀಸರು ಬಂಧಿಸಿದ್ದು 13 ಕೆಜಿ ಗಾಂಜಾ ವಶಪಡಿಸಿಕೊಂಡು ಕೇಸ್ ದಾಖಲಿಸಿಕೊಂಡು ಆರೋಪಿ ಯನ್ನ ಜೈಲಿಗೆ ಅಟ್ಟಿದ್ದಾರೆ.
ACP R K ಪಾಟೀಲ್ ನೇತೃತ್ವದಲ್ಲಿ CEN ಠಾಣೆಯ ಇನ್ಸ್ಪೆಕ್ಟರ್ ಎಂ ಎಸ್ ಹೂಗಾರ ತಂಡ ಖಚಿತ ಮಾಹಿತಿ ಮೇರೆಗೆ ಆಂಧ್ರದಿಂದ ರೈಲ್ವೆ ಮೂಲಕ ಗಾಂಜಾವನ್ನು ಹುಬ್ಬಳ್ಳಿ ನಗರಕ್ಕೆ ತಂದು ಮಾರಲು ಬಂದಿದ್ದ ವ್ಯಕ್ತಿಯನ್ನು ಪತ್ತೆ ಮಾಡಿ ಆತನಿಂದ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಪೊಲೀಸರ ಕಾರ್ಯಾಚರಣೆಗೆ ಕಮಿಷನರ್ ಲಾಭುರಾಮ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇನ್ನು ನಗರದಲ್ಲಿ ಅಕ್ರಮ ಚಟುವಟಿಕೆಗಳಿಗೆ ಅವಕಾಶ ಇಲ್ಲಾ ಎನ್ನುವ ಸಂದೇಶವನ್ನ ಮತ್ತೆ ಸಾರಿದ್ದಾರೆ.
ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
Kshetra Samachara
10/08/2022 05:59 pm