ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕ್ರೈಂ ಪ್ರಕರಣಗಳು ದಿನದಿಂದ ಹೆಚ್ಚುತ್ತಿವೆ. ಕ್ರೈಂ ತಡೆಗಟ್ಟಲು ಯಾವುದೇ ಕಟ್ಟುನಿಟ್ಟಿನ ಕ್ರಮಗಳು ಜಾರಿಯಾಗುತ್ತಿಲ್ಲ. ಹೊರತಾಗಿ ಜೈಲಿನಲ್ಲಿ ಹೆಚ್ಚುವರಿ 4 ಬ್ಯಾರಕ್ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ.
ಹೌದು.. 72.53 ಕೋಟಿ ವೆಚ್ಚದಲ್ಲಿ ನಾಲ್ಕು ಬ್ಯಾರಕ್ ನಿರ್ಮಾಣ ಮಾಡಲು ನಿರ್ಧಾರ ಮಾಡಿದ್ದು, ಹೆಚ್ಚುವರಿ 185 ಖೈದಿಗಳನ್ನು ಇರಿಸಿಕೊಳ್ಳಲು ಅನುಕೂಲವಾಗುವಂತೆ ಈ ನಿರ್ಧಾರಕ್ಕೆ ಮುಂದಾಗಿದೆ. ಹದಿನೈದು ವರ್ಷದ ಬಳಿಕ ಹುಬ್ಬಳ್ಳಿ ಉಪ ಕಾರಾಗೃಹವನ್ನು ಪುನಃ ವಿಸ್ತರಣೆ ಮಾಡಲಾಗುತ್ತಿದೆ. 185 ಖೈದಿಗಳನ್ನು ಇರಿಸಿಕೊಳ್ಳಲು ಅನುವಾಗುವಂತೆ ಹೆಚ್ಚುವರಿ ನಾಲ್ಕು ಬ್ಯಾರಕ್ ಗಳ ನಿರ್ಮಾಣಕ್ಕೆ ಕಾಮಗಾರಿ ಶುರುವಾಗಿದೆ.
ಇತ್ತಿಚೆಗೆ ನಡೆದ ಹಳೇ ಹುಬ್ಬಳ್ಳಿ ಗಲಭೆ ಸೇರಿ ಇತರೆ ಪ್ರಕರಣದಲ್ಲಿ ಆರೋಪಿಗಳ ಸಂಖ್ಯೆ ಏಕಾಏಕಿ ಹೆಚ್ಚಾಗಿತ್ತು. ಅಲ್ಲದೇ ಹುಬ್ಬಳ್ಳಿಯಲ್ಲಿ ಕ್ರೈಂ ರೇಟ್ ಹೆಚ್ಚುತ್ತಿದೆ. ಸಾಮಾನ್ಯವಾಗಿ ಜೈಲಿನ ಸಾಮರ್ಥ್ಯಕ್ಕಿಂತ 10-20 ವಿಚಾರಣಾಧೀನ ಖೈದಿಗಳ ಸಂಖ್ಯೆ ಇಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ ಕಳೆದ ವರ್ಷಗಳಲ್ಲಿ ಉಪಕಾರಾಗೃಹದ ಅಧಿಕಾರಿಗಳು ಬ್ಯಾರಕ್ ಹೆಚ್ಚಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದರು. ಇದರನ್ವಯ 22.53 ಕೋಟಿ ವೆಚ್ಚದ ಕಾಮಗಾರಿಗೆ ಮಂಜೂರಾತಿ ಇದೀಗ ಕೆಲಸ ಆರಂಭಿಸಲಾಗಿದೆ.
ಒಟ್ಟಾರೆ 55 ವರ್ಷಗಳಲ್ಲಿ ಹುಬ್ಬಳ್ಳಿ ಉಪಕಾರಾಗೃಹ ಎರಡನೇ ಬಾರಿ ವಿಸ್ತರಣೆ ಆಗುತ್ತಿದೆ. 1967 ರಲ್ಲಿ ಹುಬ್ಬಳ್ಳಿ ಉಪಕಾರಾಗೃಹ ನಿರ್ಮಾಣಗೊಂಡಿದೆ, ಆಗ ಏಳು ಬ್ಯಾರಕ್ ಗಳಿದ್ದವು. 2007 ರಲ್ಲಿ ಹೊಸದಾಗಿ ಒಂದು ಬ್ಯಾರಕ್ ನಿರ್ಮಿಸಲಾಗಿತ್ತು. ಅಲ್ಲಿಂದ ಇಲ್ಲಿವರೆಗೆ ಸುಮಾರು 105 ಖೈದಿಗಳನ್ನು ಇರಿಸಿಕೊಳ್ಳುವ ಸಾಮರ್ಥ್ಯ ಈ ಉಪಕಾರಾಗೃಹಕ್ಕೆ ಇತ್ತು. ಒಂದು ಬ್ಯಾರಕ್‌ನಲ್ಲಿ 10-15 ಖೈದಿಗಳಂತೆ ಸಾಮಾನ್ಯವಾಗಿ 120-125 ಖೈದಿಗಳು ಇದ್ದೇ ಇರುತ್ತಿದ್ದರು. ಇದೀಗ ಸುಮಾರು 20 ಖೈದಿಗಳು ಇರಲು ಅನುಕೂಲವಾಗುವಂತೆ ನಾಲ್ಕು ಬ್ಯಾರಕ್ ನಿರ್ಮಾಣ ಮಾಡಲಾಗುತ್ತಿದೆ. 105 ರಿಂದ 185 ಖೈದಿಗಳವರೆಗೆ ಇಲ್ಲಿ ಇರಿಸಿಕೊಳ್ಳಲು ಸಾಧ್ಯವಾಗಲಿದೆ.. ಒಂದು ವರ್ಷದಲ್ಲಿ ಹೊಸ ಬ್ಯಾರಕ್‌ಗಳು ತಲೆ ಎತ್ತಲಿವೆ.
ಮಲ್ಲೇಶ್ ಸೂರಣಗಿ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
Kshetra Samachara
08/07/2022 01:20 pm