ಹುಬ್ಬಳ್ಳಿ: ಚಂದ್ರಶೇಖರ ಗುರೂಜಿ ಮರಣೋತ್ತರ ಪರೀಕ್ಷೆಯಲ್ಲಿ ದೇಹದಲ್ಲಿ ಹೊಕ್ಕ ಚಾಕು ಎಷ್ಟು ಹಾಗೂ ಸ್ಥಳದಲ್ಲೇ ಸಾವಿಗೆ ಕಾರಣ ಏನು ಎಂಬುದು ಪೋಸ್ಟ್ ಮಾರ್ಟ್ಂ ರಿಪೋರ್ಟ್ ನಲ್ಲಿ ಬಯಲಾಗಿದೆ.
ಹೌದು... ಗುರೂಜಿ ದೇಹದಕ್ಕೆ 42 ಬಾರಿ ಅಲ್ಲ 54 ಬಾರಿ ಚಾಕುವಿನಿಂದ ಇರಿಯಲಾಗಿದೆ. 40 ಸೆಕೆಂಡ್ ನಲ್ಲಿ 54 ಬಾರಿ ಹಂತಕರು ಚಾಕು ಚುಚ್ಚಿದ್ದಾರೆ. ಎದೆ, ಕುತ್ತಿಗೆ, ಶ್ವಾಸಕೋಶ, ಹೊಟ್ಟೆ ಭಾಗಕ್ಕೆ ಚಾಕು ಇರಿದಿದ್ದಾರೆ.
ದೇಹದ ಹಿಂಭಾಗದಲ್ಲಿಯು ಚಾಕು ಚುಚ್ಚಲಾಗಿದ್ದು 2.3 ಸೆಂಟಿಮೀಟರ್ ಚಾಕು ದೇಹದ ಒಳ ಪ್ರವೇಶ ಮಾಡಿದೆ. ಅದಲ್ಲದೇ ಕುತ್ತಿಗೆ ಭಾಗಕ್ಕೆ 12 ಇಂಚು ಇರಿಯಲಾಗಿದೆ. 54 ಬಾರಿ ಚಾಕು ಚುಚ್ಚಿದ್ದರಿಂದ ತೀವ್ರ ರಕ್ತಸ್ರಾವವಾಗಿ ಚಾಕು ಹಿರಿದ ಮೂರು ನಿಮಿಷಗಳಲ್ಲಿಯೇ ಚಂದ್ರಶೇಖರ ಗುರೂಜಿ ಉಸಿರು ಚೆಲ್ಲಿದ್ದಾರೆ.
ಸತತ 2 ಗಂಟೆ 40 ನಿಮಿಷಗಳ ಕಾಲ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವಿಧಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಸುನೀಲ್ ಬಿರಾದಾರ ಮರಣೋತ್ತರ ಪರೀಕ್ಷೆ ನಡೆಸಿದ್ದು, ಗುರೂಜಿ ಸಾವಿನ ಕಾರಣ ದಾಖಲಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
07/07/2022 12:47 pm