ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮಾಧ್ಯಮದವರ ಮೇಲೆ ಪೊಲೀಸಪ್ಪನ ದರ್ಪ!

ಧಾರವಾಡ: ಖಾಸಗಿ ಸುದ್ದಿವಾಹಿನಿಯೊಂದರ ಛಾಯಾಗ್ರಾಹಕನ ಮೇಲೆ ಪೊಲೀಸಪ್ಪನೊಬ್ಬ ದರ್ಪ ತೋರಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದ ಘಟಿಕೋತ್ಸವದ ಸುದ್ದಿಗಾಗಿ ತೆರಳಿದ್ದ ಖಾಸಗಿ ಸುದ್ದಿವಾಹಿನಿ ಛಾಯಾಗ್ರಾಹಕ ರಾಹುಲ್ ಹೂಲಿ ಎಂಬುವವರೊಂದಿಗೆ ಪೊಲೀಸಪ್ಪ ಮಾತಿಗಿಳಿದು ಅವರ ಮೇಲೆ ದರ್ಪ ತೋರಿದ್ದಾನೆ. ಮಾಧ್ಯಮದವರು ಎಂದು ಹೇಳಿದರೂ ರೌಡಿಯಂತೆ ಛಾಯಾಗ್ರಾಹಕನ ಮೇಲೆ ಏರಿ ಬಂದಿದ್ದಾನೆ. ಇತರ ಪೊಲೀಸ್ ಸಿಬ್ಬಂದಿ ಆ ಪೊಲೀಸಪ್ಪನನ್ನು ಬಿಡಿಸಲು ಮುಂದಾದರೂ ಆತ ಮಾತ್ರ ಯಾರು ಏನು ಮಾಡುತ್ತಾರೆ ಎಂಬಂತೆ ವರ್ತನೆ ಮಾಡಿದ್ದಾನೆ.

ಹುಬ್ಬಳ್ಳಿ ಬೆಂಡಿಗೇರಿ ಠಾಣೆಯ ಪೊಲೀಸ್ ಪೇದೆ ಬಸವರಾಜ ಸಿಂಗಣ್ಣವರ ಎಂಬಾತನೇ ಈ ರೀತಿ ಮಾಧ್ಯಮವರೊಂದಿಗೆ ವರ್ತನೆ ಮಾಡಿದವನು. ಈ ಘಟನೆ ಖಂಡಿಸಿ ಮಾಧ್ಯಮದವರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಹಾದೇವ ಚೆಟ್ಟಿ ಅವರ ಮನೆ ಮುಂದೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಇರುವಾಗಲೇ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸ್ಥಳಕ್ಕೆ ಡಿಸಿಪಿ ಸಾಹಿಲ ಬಾಗ್ಲಾ ಕೂಡ ಆಗಮಿಸಿ ಪತ್ರಕರ್ತರ ಮನವೊಲಿಸಲು ಮುಂದಾದರು. ಅಲ್ಲದೇ ಕೆಲ ಪತ್ರಕರ್ತರೊಂದಿಗೆ ಪೊಲೀಸ್ ಆಯುಕ್ತ ಲಾಬುರಾಮ್ ಕೂಡ ದೂರವಾಣಿಯಲ್ಲಿ ಮಾತನಾಡಿ ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು.

ನಂತರ ಸಚಿವ ಬಿ.ಸಿ.ಪಾಟೀಲ್ ಅವರೇ ಪತ್ರಕರ್ತರನ್ನು ಕರೆಯಿಸಿ ಆ ಪೊಲೀಸ್ ಪೇದೆ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿದರು. ಅಲ್ಲದೇ ಡಿಸಿಪಿ ಸಾಹಿಲ್ ಬಾಗ್ಲಾ ಕೂಡ ಪೊಲೀಸ್ ಪೇದೆ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಾಗುವುದು ಎಂಬ ಭರವಸೆ ನೀಡಿದ ನಂತರ ಪತ್ರಕರ್ತರು ತಮ್ಮ ಪ್ರತಿಭಟನೆ ಕೈಬಿಟ್ಟರು.

Edited By : Manjunath H D
Kshetra Samachara

Kshetra Samachara

07/06/2022 07:45 pm

Cinque Terre

33.11 K

Cinque Terre

14

ಸಂಬಂಧಿತ ಸುದ್ದಿ