ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡದ ನೀರಾವರಿ ನಿಗಮದ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ

ಧಾರವಾಡ: ಧಾರವಾಡದ ನೀರಾವರಿ ನಿಗಮದ ಎಇಇ ಬಸವರಾಜ ಪಾಟೀಲ ಎನ್ನುವವರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಧಾರವಾಡದ ಸನ್ಮತಿನಗರದಲ್ಲಿ ಬಸವರಾಜ ಅವರ ಮನೆ ಇದ್ದು, ಅಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಯಾದಗಿರಿ ಎಸಿಬಿ ಅಧಿಕಾರಿಗಳಿಂದ ದಾಳಿ ನಡೆದಿದೆ.

ಸನ್ಮತಿನಗರದಲ್ಲಿರುವ ಬಸವರಾಜ ಅವರ ಮನೆ ಸದ್ಯ ಲಾಕ್ ಆಗಿದ್ದು, ಸಂಬಂಧಿಕರನ್ನು ಸ್ಥಳಕ್ಕೆ ಕರೆಯಿಸಿ ಬಾಗಿ ತೆಗೆಯಲು ಅಧಿಕಾರಿಗಳು ಪ್ರಯತ್ನ ನಡೆಸಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದೇ ಇರುವುದರಿಂದ ಎಸಿಬಿ ಅಧಿಕಾರಿಗಳು ಹೊರಗಡೆ ಕಾಯುತ್ತಿದ್ದಾರೆ. ಬಸವರಾಜ ಅವರು ಬೆಂಗಳೂರಿನಲ್ಲಿದ್ದು, ಅವರು ಅಲ್ಲಿಂದ ಬಂದ ನಂತರವೇ ಬಾಗಿಲು ತೆರೆಯುವ ಸಾಧ್ಯತೆ ಇದೆ.

Edited By : Shivu K
Kshetra Samachara

Kshetra Samachara

16/03/2022 09:27 am

Cinque Terre

35.57 K

Cinque Terre

1

ಸಂಬಂಧಿತ ಸುದ್ದಿ