ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ಬ್ರೇಕಿಂಗ್: ಮತಾಂತರ ಆರೋಪ- ನವನಗರ ಪೊಲೀಸ್ ಠಾಣೆ ಮುತ್ತಿಗೆ ಹಾಕಿದ ಹಿಂದೂ ಸಂಘಟನೆಗಳು

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ಬೈರಿದೇವರಕೊಪ್ಪದ ಚರ್ಚ್ ಒಂದರಲ್ಲಿ ಹಿಂದೂಗಳನ್ನು ಮತಾಂತರ ಮಾಡುತ್ತಿದ್ದಾರೆಂದು ಭಜರಂಗದಳದ ಕಾರ್ಯಕರ್ತರು ಚರ್ಚ್‌ಗೆ ದಾಳಿ ಮಾಡಿದ್ದರು. ಇದರಿಂದ ಹಿಂದೂ ಸಂಘಟನೆ ಮತ್ತು ಕ್ರೈಸ್ತರ ನಡುವೆ ವಾಗ್ವಾದ ನಡೆದಿತ್ತು.

ನಂತರ ಫಾಸ್ಟರ್ ಸೋಮಲಿಂಗ ಅವರಾದಿ ಅವರನ್ನು ಬಂಧನ ಮಾಡಬೇಕೆಂದು ಹಿಂದೂ ಸಂಘಟನಾಕಾರರು ಹೇಳಿದ್ದರು. ಆದರೂ ನವನಗರ ಪೊಲೀಸರು ಇಲ್ಲಿಯವರೆಗೂ ಬಂಧನ ಮಾಡದೇ ಕಾರಣ ಸಂಘಟನಾಕಾರರು ರಸ್ತೆ ತಡೆದು ಪ್ರತಿಭಟನೆ ಮಾಡಿದ್ದರು. ಆದರೂ ಕೂಡ ಬಂಧನ ಮಾಡಿಲಿಲ್ಲ ಎಂದು ಈಗ ನವನಗರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಕೂಡಲೇ ಆತನನ್ನು ಬಂಧನ ಮಾಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ.

Edited By : Vijay Kumar
Kshetra Samachara

Kshetra Samachara

17/10/2021 08:41 pm

Cinque Terre

57.5 K

Cinque Terre

16

ಸಂಬಂಧಿತ ಸುದ್ದಿ