ಧಾರವಾಡ: ಧಾರವಾಡ ಜಿಲ್ಲೆಯ ಉದ್ಯಮಿಗಳಿಗೆ ಧಮ್ಕಿ ಹಾಕುತ್ತಿದ್ದಾನೆ ಎಂಬ ಆರೋಪದ ಮೇಲೆ ಧಾರವಾಡ ಉಪನಗರ ಠಾಣೆ ಪೊಲೀಸರು ಭೂಗತ ಪಾತಕಿ ಬಚ್ಛಾಖಾನ್ ನನ್ನು ವಶಕ್ಕೆ ಪಡೆದು ನ್ಯಾಯಾಲಯದ ಎದುರು ಹಾಜರುಪಡಿಸಿದ್ದಾರೆ.
ಧಾರವಾಡದ ಜಿಲ್ಲಾ ನ್ಯಾಯಾಲಯದ ಒಳಗೆ ಹೋಗುವಾಗ ಬಚ್ಛಾಖಾನ್ ಪ್ರತಿಕ್ರಿಯೆ ನೀಡಿದ್ದು, ಧಮ್ಕಿ ಹಾಕುತ್ತಿರುವುದು ನಾನಲ್ಲ. ನನ್ನ ಹೆಸರಿನಲ್ಲಿ ಯಾರೋ ಧಮ್ಕಿ ಹಾಕುತ್ತಿದ್ದಾರೆ. ಮೊದಲು ಅವರನ್ನು ಬಂಧಿಸಿ ಅವರ ಮೇಲೆ ಕೇಸ್ ಹಾಕಿ ಎಂದಿದ್ದಾನೆ.
Kshetra Samachara
28/12/2020 12:34 pm