ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೆ ಮುಸ್ಲಿಂ ಯುವಕನೊಬ್ಬ ಕಲ್ಲಿನಿಂದ ದಾಳಿ ನಡೆಸಿದ ಪರಿಣಾಮ, ವಾಹನಗಳ ಗ್ಲಾಸ್ ಪುಡಿ ಪುಡಿಯಾಗಿವೆ.
ಇಂದು ಮುಂಜಾನೆ 8.30ಕ್ಕೆ ಪಾಲಿಕೆ ಕಚೇರಿಗೆ ಬೈಕ್ ನಲ್ಲಿ ಬಂದಿದ್ದ ಗಣೇಶ ಪೇಟ್ ನಿವಾಸಿ ಮಹಮ್ಮದ್ ಅಲಿಪ್ ಅಬ್ದುಲ್ ಹಮ್ಮಿದ್ ಎಂಬಾತ, ಶಾಸಕ ಪ್ರಸಾದ ಅಬ್ಬಯ್ಯ ನನ್ನ ಭೇಟಿಯಾಗಬೇಕು ನಮ್ಮವರು ಜೈಲಿನಲ್ಲಿದ್ದಾರೆಂದು ಅವಾಚ್ಛ ಶಬ್ದಗಳಿಂದ ನಿಂದಿಸಿದಲ್ಲದೆ ಒಂದು ಕಸದ ವಾಹನ ಹಾಗೂ ಎರಡು ಪಾಲಿಕೆ ಅಧಿಕಾರಿಗಳ ಕಾರ್ ಗಳ ಮೇಲೆ ಏಕಾಏಕಿ ಕಲ್ಲಿನಿಂದ ದಾಳಿ ಮಾಡಿದ್ದಾನೆ. ಇದರಿಂದ ಮೂರು ವಾಜನಗಳ ಗ್ಲಾಸ್ ಗಳು ಪುಡಿ ಪುಡಿಯಾಗಿವೆ.
ಅಲ್ಲೆ ಇದ್ದ ಸೆಕ್ಯೂರಿಟಿ ಸಿಬ್ಬಂದಿ ಉಪನಗರ ಠಾಣೆಯ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಉಪನಗರ ಠಾಣೆಯ ಪೋಲಿಸರು ಆರೋಪಿ ಮಹಮ್ಮದ್ ಅಲಿಪ್ ಬಂಧನ ಮಾಡಿ ಠಾಣೆಯಲ್ಲಿ ವಿಚಾರಣೆ ಮಾಡುತ್ತಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
26/05/2022 12:01 pm