ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ದೋಸ್ತಿಗಾಗಿ ಹೋದವರು ಜೈಲು ಸೇರಿದರು ; ಪ್ರೇಮ ಪುರಾಣದಲ್ಲಿ ಪ್ರೀತಿಸಿದಾತನೆ ಕೊಲೆಗಡುಕ

'ಏ ದೋಸ್ತೀ.. ಹಮ್ ನಹೀ ಚೋಡೆಂಗೇ...' ಎಂಬ ಹಾಡೊಂದು ಗೆಳೆತನದ ಮಹತ್ವವನ್ನು ಹೇಳುತ್ತದೆ. ಯುವಕರು ಗೆಳೆತನಕ್ಕೆ ಕೊಡುವಷ್ಟು ಮಹತ್ವವನ್ನು ಮತ್ಯಾವುದಕ್ಕೂ ಕೊಡುವುದಿಲ್ಲ. ಅದು ಹೊಡೆದಾಟಕ್ಕೂ ಸೈ..ಬಡಿದಾಟಕ್ಕೂ ಸೈ.

ಹೌದು ಇದಕ್ಕೆ ಸಾಕ್ಷಿ ಎನ್ನುವಂತೆ ಮೊನ್ನೆಯಷ್ಟೆ ಯುವತಿಯನ್ನು ಪ್ರೀತಿಸಿದ ಕಾರಣಕ್ಕೆ ಯುವಕನನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ನವನಗರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕೃಷ್ಣ ರೆಡ್ಡಿ, ರಾಘು ಬನ್ಸ್ ಹಾಗೂ ಸುಮುಧರ ಪೂಜಾರಿ ಎಂದು ಗುರುತಿಸಲಾಗಿದೆ. ಮುಖ್ಯ ಆರೋಪಿ ರಾಘವೇಂದ್ರ ಈಗಾಗಲೇ ಪೊಲೀಸರಿಗೆ ಶರಣಾಗಿದ್ದಾನೆ. ರಾಘವೇಂದ್ರ ನೀಡಿದ ಮಾಹಿತಿ ಆಧರಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣೆ ವ್ಯಾಪ್ಯಿಯಲ್ಲಿ ಮೇ 19 ರಂದು ಹಾಡುಹಗಲೇ ಯುವಕನ ಬರ್ಬರ ಹತ್ಯೆಗೈದ ಪ್ರಕರಣ ನಡೆದಿತ್ತು. ಹುಬ್ಬಳ್ಳಿಯ ನೇಕಾರ ನಗರದ ವಿನಯ್ ಎಂಬುವನನ್ನು ಬರ್ಬರವಾಗಿ ಹತ್ಯೆಗೈಯಲಾಗಿತ್ತು. ತ್ರಿಕೋನ ಪ್ರೇಮಕಥೆಗೆ ಯುವಕನ ಕೊಲೆಯಾಗಿರೋ ಶಂಕೆ ವ್ಯಕ್ತವಾಗಿತ್ತು. ಪ್ರೀತಿ ವಿಷಯಕ್ಕೆ ವಿನಯನನ್ನು ಟಾರ್ಗೆಟ್ ಮಾಡಿದ್ದ ಗುಂಪು, ನವನಗರ ವ್ಯಾಪ್ತಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬರ್ಬರವಾಗಿ ಕೊಲೆ ಮಾಡಿದ್ದರು.

ರಾಘವೇಂದ್ರ ಎಂಬಾತನ ಮೇಲೆ ಕೊಲೆ ಆಪಾದನೆ ಕೇಳಿ ಬಂದಿತ್ತು. ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗೆ ಜಾಲ ಬೀಸುತ್ತಿದ್ದಂತೆಯೇ ರಾಘವೇಂದ್ರ ತಾನಾಗಿಯೇ ಬಂದು ಪೊಲೀಸರಿಗೆ ಶರಣಾಗಿದ್ದ. ಕೊಲೆ ಆರೋಪಿ ರಾಘು ಗೆ ಮೂವರು ಸಹಕರಿಸಿದ್ದರು. ಘಟನೆ ನಡೆದ ಬಳಿಕ ಮೃತ ಯುವಕನನ್ನು ಆಸ್ಪತ್ರೆಗೆ ಕರೆದೊಯ್ಯಲು ಮೂವರು ಪ್ರಯತ್ನಿಸಿದ್ದರು. ಪರಿಚಯಸ್ತರ ಕಾರು ತೆಗೆದುಕೊಂಡು ಹೋಗಿದ್ದ ಮೂವರು ಯುವಕರು, ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದರು. ಸ್ನೇಹಿತ ಕರೆದನು ಎಂದು ಹೋದ ಮೂವರೂ ಯುವಕರು ಇದೀಗ ಜೈಲು ಪಾಲಾಗಿದ್ದಾರೆ. ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

23/05/2022 05:47 pm

Cinque Terre

104.36 K

Cinque Terre

4

ಸಂಬಂಧಿತ ಸುದ್ದಿ