ಹುಬ್ಬಳ್ಳಿ: ಹುಬ್ಬಳ್ಳಿಯ ದೇವಾಂಗಪೇಟ್‌ನಲ್ಲಿ ಯುವಕರಿಬ್ಬರಿಗೆ ಚಾಕು ಇರಿತದ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಹುಡುಗಿ ವಿಚಾರಕ್ಕೇ ಚಾಕು ಇರಿತವಾಗಿದೆ ಎಂಬುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಹೀಗೆ ಫೋಟೋದಲ್ಲಿ ಎದೆ ಹಾಗೂ ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದ ಇವರು ಕಾರ್ತಿಕ್ ಹಾಗೂ ನಾಗರಾಜ್. ಹುಬ್ಬಳ್ಳಿಯ ದೇವಾಂಗಪೇಟ್ ನಿವಾಸಿಗಳು. ಕಾರ್ತಿಕ್ ಕಳೆದ ಕೆಲವು ದಿನಗಳಿಂದ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದ ಆದ್ರೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಬಂದು ನಾಲ್ಕು ತಿಂಗಳಿಂದ ಬೇರೆ ಬೇರೆ ಯಾಗಿದ್ದರು.
ಇದರ ನಡುವೆ ಕಾರ್ತಿಕ್‌ನ ಮಾಜಿ ಪ್ರೇಯಸಿ ಸೂರಜ್ ಎಂಬ ಯುವಕನ ಜೊತೆ ಪ್ರೀತಿ ಪ್ರೇಮದಲ್ಲಿ ಬಿದ್ದಿದ್ದಳು. ಇದೇ ವಿಚಾರಕ್ಕೆ ಹಲವು ಬಾರಿ ಸೂರಜ್ ಹಾಗೂ ಕಾರ್ತಿಕ್ ನಡುವೆ ಒಂದೆರಡು ಬಾರಿ ಮಾತಿಗೆ ಮಾತು ಕೂಡಾ ಬೆಳೆದಿತ್ತು. ಅದೇ ರೀತಿ ಕಳೆದ ರವಿವಾರ ಕೂಡಾ ಮತ್ತೇ ಇಬ್ಬರಿಗೂ ಕೂಡಾ ಫೋನಿನಲ್ಲಿಯೇ ಮಾತಿಗೆ ಮಾತು ಬೆಳೆದಿದೆ. ಆಗ ಸೂರಜ್ ತನ್ನ ಆರು ಜನ ಸ್ನೇಹಿತರ ಜೊತೆ ಸೇರಿಕೊಂಡು ದೇವಾಂಗಪೇಟ್‌ನಲ್ಲಿ ಕಾರ್ತಿಕ್ ಮೇಲೆ ಚಾಕು ಹಾಗೂ ರಾಡ್‌ನಿಂದ ಹಲ್ಲೆ ಮಾಡಲು ಮುಂದಾದಾಗ ಜಗಳ ಬಿಡಿಸಲು ಬಂದ ನಾಗರಾಜ ಹಾಗೂ ಕಾರ್ತಿಕ್‌ಗೆ ಚಾಕು ಇರಿದು ಸೂರಜ್ ಗ್ಯಾಂಗ್ ಪರಾರಿಯಾಗಿತ್ತು.
ಗಾಯಗೊಂಡ ಕಾರ್ತಿಕ್ ಹಾಗೂ ನಾಗರಾಜನನ್ನು ಅಶೋಕ ನಗರ ಠಾಣೆಯ ಪೊಲೀಸರೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲ್ಲೆ ಮಾಡಿದ ಆರು ಜನರ ಪೈಕಿ ಸೂರಜ್, ವರುಣ, ಹಾಗೂ ಸಂಪತ್ ಎಂಬುವರನ್ನು ಬಂಧಿಸಿ ಜೈಲಿಗಟ್ಟಿದ್ದು ಪರಾರಿಯಾದ ಇನ್ನು ಮೂವರ ಪತ್ತೆಗೆ ಜಾಲ ಬೀಸಿದ್ದಾರೆ.
ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
Kshetra Samachara
20/09/2022 04:13 pm