ಹುಬ್ಬಳ್ಳಿ: ಛೋಟಾ ಮುಂಬಯಿನಲ್ಲಿ ನಡೆದಿದ್ದ ಅದೊಂದು ಶೂಟೌಟ್ ಸಧ್ಯ ಖಾಕಿ ದೊಡ್ಡ ಶಾಕ್ ನೀಡಿದೆ.ಸಿಸಿಟಿವಿ ಜಾಡು ಹಿಡಿದು ಹೊರಟ ಪೊಲೀಸರಿಗೆ ಅಂಡರ್ ವರ್ಲ್ಡ್ ಛಾಯೆ ಕಾಣಿಸಿದೆ.
ಹೌದು....ಸದ್ಯ ಅಗಷ್ಟ್ 6 ರಂದು ಹಳೇ ಹುಬ್ಬಳ್ಳಿಯ ಅಲ್ ತಾಜ್ ಬಳಿ ನಡೆದಿದ್ದ ಶೂಟೌಟ್ ಪ್ರಕರಣ ಕೊನೆಗೂ ಒಂದು ಹಂತಕ್ಕೆ ಬಂದು ನಿಂತಿದೆ. ಕೊನೆಗೂ ಸಿಸಿಟಿವಿ ಜಾಡು ಹಿಡಿದ ಪೊಲೀಸರಿಗೆ ಶೂಟರ್ಸ್ ಗಳೆನೋ ಸಿಕ್ಕಿಬಿದ್ದರು. ಆದರೆ ಅವರು ಸುಫಾರಿ ಪಡೆದು ಕೊಲೆ ಮಾಡಿದ್ದಾಗಿ ಬಾಯಿ ಬಿಟ್ಟಿದ್ದರು. ಆದರೆ ಸುಫಾರಿ ನೀಡದವರ ಹೆಸರು ಕೇಳುತ್ತಲೇ ಖಾಕಿ ಹೌಹಾರಿ ಹೋಗಿತ್ತು. ಬಚ್ಚಾಖಾನ್ ಎಂಬಾತ ತಮಗೆ ಸುಫಾರಿ ನೀಡಿದ್ದಾನೆ ಎನ್ನೋ ಮಾಹಿತಿಯನ್ನು ಕೊಲೆಗಡುಕರು ಪೊಲೀಸರಿಗೆ ನೀಡಿದರು. ಆದರೆ ಬಚ್ಚಾಖಾನ್ ಸಧ್ಯ ಕೊಲೆ ಕೇಸ್ ನಲ್ಲಿ ಮೈಸೂರು ಜೈಲಿನಲ್ಲಿದ್ದಾನೆ. ಜೈಲಿನಲ್ಲಿಯೇ ಕುಳಿತು ಸುಫಾರಿ ನೀಡಿದ್ನಾ ಎನ್ನೋ ಅನುಮಾನ ಖಾಕಿ ಕಾಡಿತ್ತು. ಹೀಗಾಗೇ ಸಧ್ಯ ಬಾಡಿ ವಾರೆಂಟ್ ಮೇಲೆ ಬಚ್ಚಾಖಾನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ...
ಸಧ್ಯ ಹಳೇ ಹುಬ್ಬಳ್ಳಿ ಪೊಲೀಸರು ಬಚ್ಚಾಖಾನ್ ನನ್ನ ಮೈಸೂರಿನಿಂದ ವಿಚಾರಣೆಗೆ ಕರೆದುಕೊಂಡು ಬಂದಿದ್ದಾರೆ. ಆದ್ರೆ ಬಚ್ಚಾಖಾನ್ ಗೂ ಕೊಲೆಯಾದ ಫ್ರೂಟ್ ಇರ್ಫಾನ್ ಗೂ ವೈಷಮ್ಯವಿತ್ತಾ..? ಅಂಡರ್ ವಲ್ಡ್ ಗೂ ಲಿಂಕ್ ಇದಿಯಾ ಎನ್ನೋ ನೂರಾರು ಪ್ರಶ್ನೆಗಳು ಸಧ್ಯ ಅವಳಿ ನಗರದ ಜನರನ್ನು ಕಾಡುತ್ತಿವೆ. ಹೀಗಾಗೇ ಸಧ್ಯ ಪೊಲೀಸರಿಗೂ ದೊಡ್ಡ ತಲನೋವು ತಂದಿದೆ.
ಸದ್ಯ ಪೊಲೀಸರ ಮಾಹಿತಿ ಪ್ರಕಾರ ರೀಯಲ್ ಎಸ್ಟೇಟ್ ಹಾಗೂ ಧಮ್ಕಿ ಸಂಬಂಧ ಬಚ್ಚಾಖಾನ್ ನೇ ಸುಫಾರಿ ನೀಡಿ ಕೊಲೆ ಮಾಡಿಸಿದ್ದಾನೆ ಎನ್ನಲಾಗುತ್ತಿದೆ. ಆದರೆ ಬಾಂಬೆ ಅಂಡರ್ ವಲ್ಡ್ ಹುಬ್ಬಳ್ಳಿಯವರೆಗೂ ಕಾಲಿಟ್ಟಿತಾ ಎನ್ನೋ ಭಯ ಇಲ್ಲಿನ ಜನತನ್ನ ಕಾಡುತ್ತಿದೆ. ಆದರೆ ಪೊಲೀಸರ ತನಿಖೆಯ ಬಳಿಕವಷ್ಟೆ ನಿಜಕ್ಕೂ ಹತ್ಯೆಯ ಅಸಲಿ ರಹಸ್ಯ ಹೊರಬಿಳುತ್ತೆ.
Kshetra Samachara
22/09/2020 04:20 pm