ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ಪಾಲಿಕೆ ಕಚೇರಿ ಮೇಲೆ ಹಾರಾಡುತ್ತಿದೆ ಹರಿದ ಕನ್ನಡದ ಬಾವುಟ!

ಧಾರವಾಡ: ಹಳದಿ ಮತ್ತು ಕೆಂಪು ಬಣ್ಣದ ಬಾವುಟವನ್ನು ಕನ್ನಡದ ಬಾವುಟ ಎಂದು ಕನ್ನಡಿಗರು ಆರಾಧಿಸುತ್ತಾರೆ ಹಾಗೂ ಆ ಬಾವುಟಕ್ಕೆ ಗೌರವ ನೀಡುತ್ತಾರೆ. ಆದರೆ, ಗೌರವ ನೀಡುವ ಈ ಬಾವುಟಕ್ಕೆ ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಅಪಮಾನ ಮಾಡುತ್ತಿದೆ.

ಹೌದು! ಧಾರವಾಡದ ಪಾಲಿಕೆ ಕಚೇರಿ ಮೇಲೆ ಹರಿದ ಕನ್ನಡದ ಬಾವುಟ ಹಾರಾಡುತ್ತಿದ್ದರೂ ಅಧಿಕಾರಿಗಳು ಆ ಬಾವುಟವನ್ನು ಬದಲಾಯಿಸುವ ಗೋಜಿಗೆ ಹೋಗಿಲ್ಲ. ಕೋಟಿಗಟ್ಟಲೇ ಯಾವ್ಯಾವುದೋ ಕೆಲಸಕ್ಕೆ ದುಡ್ಡು ಖರ್ಚು ಮಾಡುವ ಪಾಲಿಕೆ ಅಧಿಕಾರಿಗಳು ನೂರಾರು ರೂಪಾಯಿ ಖರ್ಚು ಮಾಡಿ ಒಳ್ಳೆಯ ಬಾವುಟ ಹಾಕಿಸುವಷ್ಟೂ ಸಮಯ ಅಧಿಕಾರಿಗಳಲ್ಲಿ ಇಲ್ಲವಾಗಿದೆ. ಇದು ಕನ್ನಡಿಗರಲ್ಲಿ ಆಕ್ರೋಶವನ್ನೂ ಉಂಟು ಮಾಡಿದೆ.

ನೂತನವಾಗಿ ಆಯ್ಕೆಯಾದ ಮೇಯರ್ ಈರೇಶ ಅಂಚಟಗೇರಿ ಅವರು ಇದರತ್ತ ಗಮನಹರಿಸಿ ಅಧಿಕಾರಿಗಳಿಗೆ ಕೂಡಲೇ ಸೂಚನೆ ನೀಡಬೇಕಿದೆ.

Edited By : Manjunath H D
Kshetra Samachara

Kshetra Samachara

31/05/2022 10:39 am

Cinque Terre

38.47 K

Cinque Terre

2

ಸಂಬಂಧಿತ ಸುದ್ದಿ