ಪಬ್ಲಿಕ್ ನೆಕ್ಸ್ಟ್ ವಿಶೇಷ - ಈರಣ್ಣ ವಾಲಿಕಾರ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಾರ್ವಜನಿಕರ ಅನುಕೂಲಕ್ಕಾಗಿ ಗಾರ್ಡನ್ ಮಾಡಲು ಇಟ್ಟಿದ್ದ ಜಾಗವನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಈಗ ಮಾರಾಟ ಮಾಡಿದ್ದಾರೆಂದು ಇಲ್ಲಿನ ಸ್ಥಳೀಯರು ದಾಖಲೆಯನ್ನ ಕೈಯಲ್ಲಿ ಹಿಡಿದುಕೊಂಡು ಗಂಭೀರವಾಗಿ ಆರೋಪ ಮಾಡುತ್ತಿದ್ದಾರೆ.
ಹೌದು.ಉಣಕಲ್ ಗ್ರಾಮದ ಟಿಂಬರ ಪಕ್ಕದಲ್ಲಿ ಬರುವ ಸರ್ವೆ ನಂಬರ್ 58/3 ಎ ಈ ಆಸ್ತಿಯಲ್ಲಿ ಇದ್ದಂತಹ ಸಾರ್ವಜನಿಕ ಬಳಕೆ ಮೀಸಲಿಟ್ಟ 27 ಗುಂಟೆ ಜಾಗಯಲ್ಲಿ ಸುಳ್ಳು ದಾಖಲೆಗಳನ್ನ ಸೃಷ್ಟಿಸಿ 20 ಗುಂಟೆ ಜಾಗಯನ್ನು ಸುರೇಖಾ ಗುಡದಿನ್ನಿ, ಶ್ರೀಶೈಲ್ ಗುಡದಿನ್ನಿ ದಂಪತಿ ಮಾರಾಟ ಮಾಡಿ ಕೋಟಿ ಕೋಟಿ ಹಣವನ್ನು ಪಡದಿದ್ದಾರೆ. ಇದನ್ನು ಕಂಡು ಗೊತ್ತಿಲ್ಲದಂಗೆ ಪಾಲಿಕೆ ಆಯುಕ್ತರು, ವಲಯ ಕಚೇರಿಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಕೂಡಲೇ ಪಾಲಿಕೆ ಆಯುಕ್ತರು ಸುರೇಖಾ ಗುಡದಿನ್ನಿ ದಂಪತಿ ಮೇಲೆ ಭೂ ಕಬಳಿಕೆ ಕಾಯ್ದೆ ಅಡಿಯಲ್ಲಿ ಶಿಕ್ಷೆಯಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ ಇದೇ ರೀತಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪಾಲಿಕೆಗೆ ಸಂಬಂಧಿಸಿದ ಜಾಗಗಳು ಸಾಕಷ್ಟಿವೆ. ಸುಳ್ಳು ದಾಖಲೆ ಸೃಷ್ಟಿ ಮಾಡಿ ಮಾರಾಟ ಮಾಡುತ್ತಾರೆಂದರೆ ಪಾಲಿಕೆ ಅಧಿಕಾರಿಗಳು ಏನು ಮಾಡ್ತಿದ್ದಾರೆ ಎಂಬ ಪ್ರಶ್ನೆ ಹುಬ್ಬಳ್ಳಿ ಜನರಲ್ಲಿ ಕಾಡುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೆ ಈ ಜಾಗವನ್ನು ಸಮೀಕ್ಷೆ ಮಾಡಿ ಕಠಿಣ ಕ್ರಮ ಜರುಗಿಸಬೇಕಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/03/2022 12:18 pm