ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ನಿಮ್ಮನ್ನು ಯಾವಾಗ ಬಂಧಿಸಿದ್ದಾರೆ?

ಧಾರವಾಡ: ಯೋಗೀಶಗೌಡ ಗೌಡರ ಹತ್ಯೆಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಿದ ಆರೋಪದ ಮೇಲೆ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಸೋದರ ಮಾವ ಚಂದ್ರಶೇಖರ ಇಂಡಿ ಅವರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಇಂದು ಅವರನ್ನು ಧಾರವಾಡ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈ ವೇಳೆ ನ್ಯಾಯಾಲಯ, ಇಂಡಿ ಅವರಿಗೆ ನಿಮ್ಮನ್ನು ಯಾವಾಗ ಬಂಧಿಸಲಾಗಿದೆ ಎಂದು ಕೇಳಿದ ಪ್ರಸಂಗ ಜರುಗಿತು.

ನ್ಯಾಯಾಲಯದ ಈ ಪ್ರಶ್ನೆಗೆ ಉತ್ತರಿಸಿದ ಚಂದ್ರಶೇಖರ, ಮೊನ್ನೆಯೇ ನನ್ನನ್ನು ಬಂಧಿಸಲಾಗಿದೆ. ನಾನು ನನ್ನ ತಂದೆಯೊಂದಿಗೆ ಆಸ್ಪತ್ರೆಯಲ್ಲಿದ್ದೆ. ಅಲ್ಲಿಂದಲೇ ನನ್ನನ್ನು ಬಂಧಿಸಲಾಗಿದೆ. ಯಾವುದೇ ಮಾಹಿತಿ, ನೋಟಿಸ್ ನೀಡದೇ ನನ್ನನ್ನು ಬಂಧಿಸಲಾಗಿದೆ. ನಾನು ಸಿಬಿಐ ವಿಚಾರಣೆಗೆ ಸಹಕರಿಸಿದ್ದೇನೆ. ಅವರು ಕರೆದಾಗಲೆಲ್ಲ ವಿಚಾರಣೆಗೆ ಬಂದಿದ್ದೇನೆ. ಈ ಪ್ರಕರಣದಲ್ಲಿ ನನ್ನದು ಯಾವುದೇ ಪಾತ್ರವಿಲ್ಲ ಎಂದು ವಾದ ಮಂಡಿಸಿದ್ದಾರೆ.

ಬಳಿಕ ನ್ಯಾಯಾಲಯ, ಏನಿದು ಇಂಡಿ ಅವರ ಹೇಳಿಕೆ ಎಂದು ಸಿಬಿಐ ಅಧಿಕಾರಿ ರಾಕೇಶ್ ರಂಜನ್ ಅವರನ್ನು ಪ್ರಶ್ನೆ ಮಾಡಿದೆ. ನ್ಯಾಯಾಲಯದ ಈ ಪ್ರಶ್ನೆಗೆ ಉತ್ತರಿಸಿದ ಅವರು, ಮೊನ್ನೆ ವಶಕ್ಕೆ ಪಡೆದು ನಿನ್ನೆ ಬಂಧಿಸಲಾಗಿದೆ. ಕಂಟ್ರಿ ಪಿಸ್ತೂಲ್ ಪೂರೈಕೆ ಮಾಡಿದ್ದು ಚಂದ್ರಶೇಖರ ಅವರೇ ಎಂದು ಖಚಿತವಾದ ಬಳಿಕ ಬಂಧಿಸಲಾಗಿದೆ. ರೌಡಿ ಧರ್ಮರಾಜ ಚಡಚಣ ಅವರಿಂದ ಪಿಸ್ತೂಲ್ ಪಡೆಯಲಾಗಿತ್ತು. ಇದು ತನಿಖೆ ವೇಳೆ ಬಯಲಿಗೆ ಬಂದಿದೆ. ಇನ್ನೂ ಹೆಚ್ಚಿನ ವಿಚಾರಣೆಗಾಗಿ ಚಂದ್ರಶೇಖರ ಅವರನ್ನು ಎರಡು ದಿನ ಕಸ್ಟಡಿಗೆ ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.

ನಂತರ ನ್ಯಾಯಾಲಯ ಈ ವಿಚಾರಣೆಯನ್ನು ಮಧ್ಯಾಹ್ನ 3 ಗಂಟೆಯ ನಂತರ ಮುಂದೂಡಿತು.

Edited By :
Kshetra Samachara

Kshetra Samachara

14/12/2020 03:20 pm

Cinque Terre

79.8 K

Cinque Terre

0

ಸಂಬಂಧಿತ ಸುದ್ದಿ