ಹುಬ್ಬಳ್ಳಿ: ಆತ ನಗರದ ದೊಡ್ಡ ರಿಯಲ್ ಎಸ್ಟೇಟ್ ಕುಳ. ಇತ್ತಿಚೆಗೆ ಸಾಮಾಜಿಕ ಕಾರ್ಯಕರ್ತನಾಗಿ ಬದಲಾಗಿದ್ದ ಈ ರೌಡಿಶೀಟರ್ ಹಾಡಹಗಲೆ ಬೀದಿ ಹೆಣವಾಗಿದ್ದ. ಈತನ ಕೊಲೆಗೆ ಸುಪಾರಿ ನೀಡಿದ್ದ ರಹಸ್ಯ ಬಯಲಾಗಿದ್ದು, ಸುಪಾರಿ ಕಿಲ್ಲರ್ ಗಳಿಗ ಕಂಬಿ ಏಣಿಸುವಂತಾಗಿದೆ..
ನಟೋರಿಯಸ್ ರೌಡಿಶೀಟರ್ ಪ್ರೂಟ್ ಇರ್ಪಾನ್ ಹತ್ಯೆ ಪ್ರಕರಣ ಹುಬ್ಬಳ್ಳಿ ಮಂದಿಯನ್ನು ಬೆಚ್ಚಿ ಬಿಳಿಸಿತ್ತು. ಈ ಘಟನೆ ಮಾಸುವ ಮುನ್ನವೆ ಹುಬ್ಬಳ್ಳಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಹಾಡಹಗಲೆ ಎಲ್ಲೆಂದರಲ್ಲಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿತ್ತು.
ನಗರದ ರಮೇಶ ಬಾಂಡಗೆ ಅಂದು ಮುಂಜಾನೆ ಸಲೂನ್ ಶಾಪ್ ಗೆ ಹೋಗಿ ಮನೆಗೆ ಬರುತ್ತಿದ್ದ ವೇಳೆ ಬಾರಸನ್ ಗಲ್ಲಿಯಲ್ಲಿ ದಾಳಿ ನಡೆಸಿದ್ದ ಕಿರಾತಕ, ಚಾಕುವಿನಿಂದ ಇರಿದು ಕೊಲೆ ಮಾಡಿದ್ದ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ರಮೇಶ ಬಾಂಡಗೆಯನ್ನು ತಕ್ಷಣ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಸೇರಿಸಿದ್ರು,ಮಾರ್ಗ ಮಧ್ಯದಲ್ಲಿ ರಮೇಶ ಉಸಿರು ಚೆಲ್ಲಿದ್ದ. ಕೊಲೆಗಾರನ ಬೇಟೆಗೆ ಬಲೆ ಬಿಸಿದ್ದ ಪೊಲೀಸರಿಗೆ ರಿಯಲ್ ಎಸ್ಟೇಟ್ ಉದ್ಯಮಿಯ ಕೊಲೆ ರಹಸ್ಯ ಬೇದಿಸುವುದು ಸವಾಲಿನ ಕೆಲಸವಾಗಿತ್ತು.
ಕೊನೆಗೂ ಕೊಲೆಯ ರಹಸ್ಯ ಬಯಲಾಗಿದ್ದು, ರಮೇಶ ಬಾಂಡಗೆ ಕೊಲೆಗೆ ಸುಪಾರಿ ನೀಡಿದ್ದ ವಿಷಯ ಬೆಳಕಿಗೆ ಬಂದಿದೆ. 25 ಲಕ್ಷಕ್ಕೆ ಇಜಾಜ್ ಅಹ್ಮದ್ ಬಂಕಾಪುರ್ ಸುಪಾರಿ ಪಡೆದಿದ್ದ. ಲಕ್ಷಾಂತರ ರೂಪಾಯಿಗೆ ಸುಪಾರಿ ಪಡೆದು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ.
ಕೊಲೆಯಾದ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಗಳು, ಕೊಲೆಗಾರನ ಪತ್ತೆಗೆ ಪೊಲೀಸರಿಗೆ ಸುಳಿವು ನೀಡಿತ್ತು. ಇದೆ ಸಿಸಿಟಿವಿ ದೃಶ್ಯ ಹಾಗೂ ಕಾಲ್ನಡಿಗೆ ಆದರಿಸಿ ಆರೋಪಿಯನ್ನ ಶಹರ ಠಾಣೆ ಪೊಲೀಸರು ಪತ್ತೆ ಹಚ್ಚಿದ್ರು.
ಪೊಲೀಸರ ವಿಚಾರಣೆ ವೇಳೆ ಕೊಲೆಗೆ ಸುಪಾರಿ ಪಡೆದಿದ್ದ ವಿಷಯ ಇಜಾಜ್ ಬಾಯ್ಬಿಟ್ಟಿದ್ದ. ಸದರಸೋಪಾ ನಿವಾಸಿ ರಫಿಕ ಜವಾರಿ ಹಾಗೂ ಶಿವಾಜಿ ಮಿಶ್ಯಾಳ ಸುಪಾರಿ ನೀಡಿದ್ದರು.
ಗಬ್ಬೂರ ಬಳಿಯ ಭೂಮಿ ವಿಷಯಕ್ಕೆ ಸಂಬಂಧಿಸಿದಂತೆ ರಮೇಶ ಬಾಂಡಗೆ ಜೊತೆಗೆ ಜಗಳವಾಗಿತ್ತು. ತನ್ನ ಸಹೋದರ ಹಾಗೂ ಸ್ನೇಹಿತರ ಜೊತೆಗೆ ಸೇರಿ ಸುಪಾರಿ ಪಡೆದಿದ್ದ ಇಜಾಜ್ ಕೊಲೆ ಮಾಡಿ ಬಿಟ್ಟಿದ್ದ.
ವಾಸೀಮ ಬಂಕಾಪುರ, ಫಯಾಜ್ ಅಹ್ಮದ್ ಪಲ್ಲಾನ್, ತೌಶಿಫ್ ನರಗುಂದ ಕೊಲೆಗೆ ಸಾಥ್ ನೀಡಿ ಈಗ ಪೊಲೀಸರ ಅತಿಥಿಯಾಗಿದ್ದಾರೆ.
ರೌಡಿಶೀಟರ್ ಪ್ರೂಟ್ ಇರ್ಪಾನ್ ಹತ್ಯೆ ಬಳಿಕ ನಗರದ ಜನತೆಯನ್ನ ಬೆಚ್ಚಿಬಿಳುಸುವಂತೆ ಮಾಡಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ ಪ್ರಕರಣದ ರಹಸ್ಯ ಬಯಲಾಗಿದ್ದು, ಸುಪಾರಿ ಪಡೆದಿದ್ದ ಕೊಲೆ ಆರೋಪಿಗಳಿಗೆ ಕಂಬಿ ಎಣಿಸುವಂತಾಗಿದೆ..
Kshetra Samachara
09/12/2020 04:28 pm