ಹುಬ್ಬಳ್ಳಿ: ಹು-ಧಾ ಮಹಾನಗರ ಹಾಗೂ ಧಾರವಾಡ ಜಿಲ್ಲೆಯ ಕ್ರೈಂಗಳಿಗೆ ಕಡಿವಾಣ ಹಾಕಲು ಡಿಸಿಪಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ರಾತ್ರಿ ವೇಳೆ ಹುಬ್ಬಳ್ಳಿಯ ಸೆಟ್ಲಮೆಂಟ್ ಗೆ ಭೇಟಿ ನೀಡಿ ಎಚ್ಚರಿಕೆ ನೀಡಿದರು.
ಅಕ್ರಮವಾಗಿ ಮಾರಕಾಸ್ತ್ರಗಳನ್ನ ಹೊಂದಿದ್ದರೆಂಬ ಆರೋಪದಲ್ಲಿ ಸೆಟ್ಲಮೆಂಟ್ ಹಾಗೂ ಇನ್ನುಳಿದ ಪ್ರದೇಶಗಳ ಹಲವರನ್ನ ತಡರಾತ್ರಿಯವರೆಗೂ ಬೆಂಡಿಗೇರಿ ಠಾಣೆಯಲ್ಲಿ ವಿಚಾರಣೆ ನಡೆಸಲಾಯಿತು.
ಬೆಂಡಿಗೇರಿ ಠಾಣೆಯಲ್ಲಿ ಸ್ವತಃ ಡಿಸಿಪಿ ಪಿ.ಕೃಷ್ಣಕಾಂತ ಆಗಮಿಸಿ ವಿಚಾರಣೆ ಮಾಡಿದರು. ಈ ಸಮಯದಲ್ಲಿ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿತ್ತು.
ಅಕ್ರಮವಾಗಿ ಸಂಗ್ರಹಿಸಿಟ್ಟ ಮಾರಕಾಸ್ತ್ರಗಳ ಬಗ್ಗೆ ಮಾಹಿತಿ ನೀಡುವಂತೆಯೂ ತಾಕೀತು ಮಾಡಿದ್ದು, ರಾತ್ರೋರಾತ್ರಿ ನಡೆದ ಈ ಕಾರ್ಯಾಚರಣೆ ಸೆಟ್ಲಮೆಂಟ್ ಪ್ರದೇಶದಲ್ಲಿನ ಕೆಲವರಿಗೆ ನಡುಕ ಹುಟ್ಟಿಸಿತ್ತು. ಪೊಲೀಸರ ಕಣ್ಣು ತಪ್ಪಿಸಿ, ಕಾನೂನು ಬಾಹಿರ ಚಟುವಟಿಕೆ ಮಾಡಿದ್ರೇ ಪೊಲೀಸರು ಸುಮ್ಮನಿರಲ್ಲ ಎಂಬ ಎಚ್ಚರಿಕೆಯನ್ನ ಡಿಸಿಪಿ ಪಿ.ಕೃಷ್ಣಕಾಂತ ನೀಡಿದರು.
Kshetra Samachara
18/11/2020 12:55 pm