ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯೋಗೀಶಗೌಡ ಪ್ರಕರಣ: ಸಿಪಿಐ ಟಿಂಗರೀಕರ್ ಮೇಲೆ ಹಿರಿಯ ಅಧಿಕಾರಿಗಳ ಒತ್ತಡವಿತ್ತೆ?

ಜಿ.ಪಂ.ಸದಸ್ಯ ಯೋಗೇಶ ಗೌಡ್ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದ ಉಪನಗರ ಠಾಣೆ ಇನ್ಸ್ ಪೆಕ್ಟರ್ ಚೆನ್ನಕೇಶವ ಟಿಂಗರಿಕರ್ ಹಿರಿಯ ಅಧಿಕಾರಿಗಳ ಒತ್ತಡಕ್ಕೆ ಬಲಿಯಾಗಿದ್ದರೆ?

ಆ ವೇಳೆ ಅಧಿಕಾರಿಗಳ ಒತ್ತಡಕ್ಕೆ ಮಣಿದು ತನಿಖೆಯ ದಾರಿ ತಪ್ಪಿಸಲು ಪ್ರಯತ್ನಸಿದರೆ ಎನ್ನುವುದು ಈಗಾ ಬೆಳಕಿಗೆ ಬರುತ್ತಿದೆ.

ಉಪನಗರ ಠಾಣೆಯ ಪೊಲೀಸರ ಚಾರ್ಜ್ ಶೀಟ್ ನಿಂದಲೇ ಕೊಲೆಗೆ ಸಂಚು ನಡೆಸಿದ್ದು ಸ್ಪಷ್ಟವಾಗಿದೆ.

ಉಪನಗರ ಠಾಣೆಯ ಇನ್ಸ್ ಪೆಕ್ಟರ್ ಆಗಿದ್ದ ಹಾಗೂ ಹತ್ಯೆಯ ತನಿಖಾಧಿಕಾರಿಯೂ ಆಗಿದ್ದ ಟಿಂಗರಿಕರ್ ಮೇಲೆ ಹಿರಿಯ ಪೊಲೀಸ್ ಅಧಿಕಾರಿಗಳು ಒತ್ತಡ ಹೇರಿರುವುದು ಕಂಡು ಬಂದಿದೆ.

ಟಿಂಗರಿಕರ್ ಮೇಲೆ ಎಸಿಪಿ ವಾಸುದೇವ, ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ, ಡಿಸಿಪಿ ಜಿನೇಂದ್ರ ಖಣಗಾವಿ, ಮಲ್ಲಿಕಾರ್ಜುನ ಬಾಲದಂಡಿ ಒತ್ತಡ ಹೇರಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಜಿ.ಪಂ. ಸದಸ್ಯ ಯೋಗೀಶ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳಿಗೆ ಮಹತ್ವದ ಸುಳಿವು ಪ್ರಾಪ್ತಿಯಾಗುವಲ್ಲಿ ರಾಜ್ಯ ಪೊಲೀಸರು ಸಲ್ಲಿಸಿದ್ದ ಆರೋಪ ಪಟ್ಟಿಯೇ ಪ್ರಮುಖ ಅಸ್ತ್ರವಾಗಿದೆ.

ಸದ್ಯ ಸಿಬಿಐ ತನಿಖೆ ವೇಳೆ ಪೊಲೀಸರು ಮಾಡಿದ ಎಡವಟ್ಟುಗಳ ಸರಮಾಲೆಯೇ ಹೊರ ಬಂದಿದೆ.

ಚಾರ್ಜ್ ಶೀಟ್ ಸಲ್ಲಿಸುವಾಗಲೇ ಪೊಲೀಸರು ತಪ್ಪೆಸಗಿರುವುದು ಸ್ಪಷ್ಟವಾಗಿದೆ.

ಪೊಲೀಸರು ಆರೋಪ ಪಟ್ಟಿಯಲ್ಲಿ ಎಸಗಿರುವ 20 ಕ್ಕೂ ಹೆಚ್ಚು ತಪ್ಪುಗಳೇ ಸಿಬಿಐ ಅಧಿಕಾರಗಳಿಗೆ ಆನೆಬಲ ನೀಡಿರುವುದು ಬಹಿರಂಗವಾಗಿದೆ.

ಘಟನೆ ನಡೆದ ಒಂದೂವರೆ ಗಂಟೆ ಬಳಿಕ ಉಪನಗರ ಠಾಣೆಯ ಇನ್ಸ್ ಪೆಕ್ಟರ್ ಟಿಂಗರಿಕರ್ ಸ್ಥಳಕ್ಕೆ ತೆರಳಿದ್ದಾರೆ.

ಹತ್ಯೆಯಾದ ಸ್ಥಳ ಠಾಣೆಯಿಂದ ಅನತಿ ದೂರದಲ್ಲಿದ್ದರು ಪೊಲೀಸರು ತಡವಾಗಿ ಹೋಗಲು ಕಾರಣ ಸಾಕ್ಷ್ಯ ನಾಶಪಡಿಸೋ ಉದ್ದೇಶ ಎನ್ನುವ ಅನುಮಾನ ತನಿಖೆ ಕೈತಂಡದ್ದು.

ಇನ್ನು ಆಗಿನ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ, ಜಿ.ಪಂ. ಸದಸ್ಯನ ಕೊಲೆಯಾಗಿ ಗಂಟೆ ಕಳೆದರೂ ಮಾಹಿತಿ ಇಲ್ಲ ಎಂದಿದ್ದರು ಮಾತ್ರವಲ್ಲದೆ ಕಣ್ಣಿಗೆ ಖಾರದಪುಡಿ ಹತ್ಯೆ ಮಾಡಲಾಗಿತ್ತು.

ಆದರೆ ಪೊಲೀಸರು ಖಾರದಪುಡಿಯನ್ನು ಎಫ್.ಎಸ್.ಎಲ್. ಗೆ ಕಳಿಸಿರಲಿಲ್ಲ. ಇದಷ್ಟೇ ಅಲ್ಲದೆ ಕೊಲೆಗೆ ಬಳಸಿದ್ದ ಮಾರಕಾಸ್ತ್ರಗಳ ಬದಲಿಗೆ ಪೊಲೀಸರು ಬೇರೆ ವೆಪೆನ್ಸ್ ಇಟ್ಟಿದ್ದರು ಎಂಬುದು ತನಿಖೆಯಲ್ಲಿ ಪತ್ತೆಯಾಗಿತ್ತು.

ಪೊಲೀಸರು ಹೊಸ ಮಾರಕಾಸ್ತ್ರ ತೋರಿಸಿ ಕೊಲೆಗೆ ಬಳಸಿದ್ದ ಮಾರಕಾಸ್ತ್ರಗಳನ್ನೇ ಸೀಜ್ ಮಾಡಿರೋದಾಗಿ ನಮೂದು ಮಾಡಿದ್ದರು.

ಆದರೆ ದೇಹದ ಮೇಲಿನ ಮಾರ್ಕ್ ಗಳೇ ಬೇರೆ ಕಥೆ ಹೇಳುತ್ತಿದ್ದವು. ಹೀಗಾಗಿ ಸಿಬಿಐ ಅಧಿಕಾರಿಗಳು ಇದರ ಹಿಂದೆ ಬಿದ್ದರು.

ಹೀಗೆ ಹತ್ತು ಹಲವಾರು ಮಾಹಿತಿಗಳನ್ನು ಕಲೆ ಹಾಕಿರುವ ಸಿಬಿಐ ಅಧಿಕಾರಿಗಳು ಸೂಕ್ತ ತನಿಖೆ ಕೈಗೊಂಡಿದ್ದಾರೆ.

ತನಿಖಾಧಿಕಾರಿ ಟಿಂಗರಿಕರ್ ಗೆ ಒಂದೇ ನಂಬರ್ ನಿಂದ ಕರೆ ಬಂದಿದ್ದನ್ನು ಸಿಬಿಐ ತೀಕ್ಷಣವಾಗಿ ಗಮನಿಸಿತ್ತು. ಅಷ್ಟಕ್ಕೂ ಆ ನಂಬರ್ ಆಯುಕ್ತರದ್ದು ಎನ್ನುವುದು ಗಮನಾರ್ಹ.

ಸಿಸಿಟಿವಿ ಫೂಟೇಜ್ ನಲ್ಲಿ ಹತ್ಯೆ ಘಟನೆಯ ಮೊದಲು ಮತ್ತು ನಂತರದ ವಿಡಿಯೋ ಕಟ್. ಪೊಲೀಸರು ಕೇವಲ ಮೂರು ನಿಮಿಷದ ವೀಡಿಯೋ ಬಿಡುಗಡೆ ಮಾಡಿದ್ದರು.

ಟಿಂಗರಿಕರ್ ಆಕ್ಷೇಪಣೆ ವ್ಯಕ್ತಪಡಿಸುತ್ತಾ ಇದ್ದಂತೆ ಇತರೆ ಸಿಬ್ಬಂದಿಗಳೇ ಕೇಸಿನ ದಾಖಲೆ ಸಿದ್ಧಪಡಿಸಿದ್ದರು.

ಇದನ್ನು ಗಮನಿಸಿದ ಟಿಂಗರಿಕರ್ ಅವುಗಳಿಗೆ ಸಹಿ ಮಾಡದೇ, ಸೀದಾ ಮನೆಗೆ ಹೋಗಿ ಕೂತಿದ್ದರು. ಅಲ್ಲೂ ಟಿಂಗರಿಕರ್ ಮೇಲೆ ಒತ್ತಡ ತರಲಾಗಿತ್ತು.

ಪೊಲೀಸ್ ಸಿಬ್ಬಂದಿ ಟಿಂಗರಿಕರ್ ಮನೆಗೇ ಹೋಗಿ ಕೇಸಿನ ದಾಖಲೆಗೆ ಸಹಿ ಮಾಡಿಸಿಕೊಂಡು ಬಂದಿದ್ದರು. ಆ ಸಮಯದಲ್ಲಿ ಟಿಂಗರಿಕರ್ ಅಳುತ್ತಲೇ ಸಹಿ ಮಾಡಿದ್ದರಂತೆ.

ಸಹಿಯ ಬಳಿಕ ಟಿಂಗರಿಕರ್ ಗೆ ಸುಮಾರು 16 ಲಕ್ಷ ರೂಪಾಯಿ ಸಂದಾಯವಾಗಿರೋ ಅನುಮಾನವನ್ನೂ ಸಿಬಿಐ ವ್ಯಕ್ತಪಡಿಸಿದೆ.

ಸದ್ಯದರಲ್ಲಿಯೇ ನಿಜವಾದ ಅಪರಾಧಿಗಳಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ…

Edited By : Nirmala Aralikatti
Kshetra Samachara

Kshetra Samachara

07/11/2020 02:49 pm

Cinque Terre

47.6 K

Cinque Terre

6

ಸಂಬಂಧಿತ ಸುದ್ದಿ