ಹುಬ್ಬಳ್ಳಿ:ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿಯನ್ನು ಮೂರು ದಿನ ವಶಕ್ಕೆ ಪಡೆದಿರುವ ಸಿಬಿಐ ತಂಡ ಡ್ರಿಲ್ ಮುಂದುವರೆಸಿದೆ.
ಹುಬ್ಬಳ್ಳಿಯ ಸಿಎಆರ್ ಗ್ರೌಂಡ್ ನಲ್ಲಿ ಆರು ಜನ ಸಿಬಿಐ ಅಧಿಕಾರಿಗಳ ತಂಡದಿಂದ ವಿಚಾರಣೆ ನಡೆಸಲಾಗುತ್ತಿದೆ.
ಕೊಲೆಗೆ ಒಳಸಂಚು ಹಾಗೂ ಈಗಾಗಲೇ ಬಂಧಿತರಾಗಿರುವ ಆರೋಪಿಗಳು ವಿನಯ್ ಪಾತ್ರದ ಬಗ್ಗೆ ಹೇಳಿಕೆ ನೀಡಿದ್ದಾರೆ ಎಂಬ ಮಾಹಿತಿ ಮೇರೆಗೆ ಸಿಬಿಐ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಇಂದು ಇಡೀ ದಿನ ವಿನಯ್ ಗೆ ಡ್ರಿಲ್ ಮಾಡಲಿದ್ದಾರೆ.
Kshetra Samachara
07/11/2020 12:00 pm