ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನಲ್ಲಿ ಸುಪ್ರೀಂ ಕೋರ್ಟ್ ಆದೇಶ ಮೀರಿ ಅಕ್ರಮ ಗಣಿಗಾರಿಕೆ

ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಅಕ್ರಮ ವಹಿವಾಟಿನ ಬಗ್ಗೆ ಗಟ್ಟಿ ಧ್ವನಿಯಲ್ಲಿ ಪ್ರತಿರೋಧ ಕೇಳಿ ಬರುತ್ತಿದೆ. ಆದರೆ ಪಟ್ಟಣದ ಕಣ್ಣಳತೆ ದೂರದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದರೂ ಯಾರೂ ಏಕೆ ಚಕಾರ ಎತ್ತುತ್ತಿಲ್ಲ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

ಹೌದು...ತಾಲೂಕಿನ ಶಿರಹಟ್ಟಿಯಲ್ಲಿ ಅನೇಕ ವರ್ಷಗಳಿಂದ ಕಲ್ಲುಬಂಡೆಯ ಅಕ್ರಮ ಗಣಿಗಾರಿಕೆ ಮುಂದುವರಿದಿದೆ. ಪರಿಸರಕ್ಕೆ ತೀವ್ರತರಹದಲ್ಲಿ ಹಾನಿ ಉಂಟಾಗುತ್ತಿದ್ದರೂ ಅಕ್ರಮ ತಡೆಯುವ ಪ್ರಯತ್ನ ಆಡಳಿತದಿಂದ ಆಗುತ್ತಿಲ್ಲ. ಅಕ್ರಮ ಕಲ್ಲು ಗಣಿಗಾರಿಕೆ ಹತ್ತಿರದಲ್ಲಿ ಅಲ್ಲದೆ ಪಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ 13ರ ಮಾರ್ಗವೂ ಇದೆ. ಆದರೂ ಅಕ್ರಮ ಗಣಿಗಾರಿಕೆ ರಾಜಾರೋಷವಾಗಿ ನಡೆದಿದೆ. ಗಣಿ ಮತ್ತು ಭೂ ವಿಜ್ಞಾನ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಅರಣ್ಯ ಮತ್ತು ಜೀವಿಶಾಸ್ತ್ರ ಇಲಾಖೆಯ ನಿಯಮಗಳನ್ನು ಕಲ್ಲುಗಣಿಗಾರಿಕೆ ನುಂಗಿ ಹಾಕಿದೆ.

ಒಂದು ಟನ್‌ ಕಲ್ಲು ಸಾಗಣೆಗೆ ಸರಕಾರ ಕೇವಲ 60 ರೂಪಾಯಿ ಪಡೆಯುತ್ತಿದೆ. ಸಾರಿಗೆ ನಿಯಮದ ಪ್ರಕಾರ 1 ಲಾರಿಗೆ 10 ಟನ್‌ ಕಲ್ಲು ಸಾಮಗ್ರಿ ತುಂಬಿಸಲು ಅವಕಾಶ ಇದ್ದು ಸರಕಾರಕ್ಕೆ ಕೇವಲ 600 ರೂಪಾಯಿ ಆದಾಯ ಸಿಗುತ್ತದೆ. ವರ್ಷಕ್ಕೆ ಸುಮಾರು 100 ಕೋಟಿ ರೂ.ಗೂ ಅಧಿಕ ವಹಿವಾಟಿನ ಕಲ್ಲುಗಣಿಗಾರಿಕೆ ಅನೇಕರನ್ನು ಕುಬೇರರನ್ನಾಗಿಸಿದೆ. ಆದರೆ ಸರಕಾರಕ್ಕೆ ಚಿಲ್ಲರೆ ಕಾಸು ರಾಯಧನವಾಗಿ ಸಲ್ಲಿಕೆಯಾಗುತ್ತಿದೆ.

ಅರವತ್ತು ಎಕರೆಗೂ ಹೆಚ್ಚು ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಿರಂತರವಾಗಿದೆ. ಕಲ್ಲು ಬೆಟ್ಟವನ್ನು ಜಿಲಿಟಿನ್‌ ಬಳಸಿ ಸ್ಪೋಟಿಸಲಾಗುತ್ತಿದ್ದು ಮಣ್ಣಿನ ಗುಡ್ಡಗಳನ್ನು ಬೃಹತ್‌ ಸಾಮರ್ಥ್ಯ‌ದ ಜೆಸಿಬಿ, ಹಿಟಾಚಿ ಯಂತ್ರದಿಂದ ಧ್ವಂಸಗೊಳಿಸಲಾಗಿದೆ. ಆದರೆ, ಸಂಬಂಧಪಟ್ಟ ಇಲಾಖೆಗಳು ಮಾತ್ರ ಈ ಕುರಿತು ಚಕಾರ ಎತ್ತಿಲ್ಲ.

ಕಲ್ಲು ಗಣಿಗಾರಿಕೆ ನಡೆಸಲು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅವಕಾಶ ಕಲ್ಪಿಸಿದೆ. ಗಣಿಗಾರಿಕೆ ಅನುಮತಿಯಲ್ಲೂ ಅಕ್ರಮ ಎಸಗಿರುವ ಅಂಶ ಇದೆ. ಅಕ್ರಮ ಪ್ರೋತ್ಸಾಹಿಸುವ ಪ್ರಯತ್ನ ನಿರಂತರವಾಗಿದ್ದು ಇಲಾಖೆ ಮಾತ್ರ ಗಾಢನಿದ್ದೆಗೆ ಜಾರಿದಂತಿದೆ.ಬೆಳಗಿನ ಜಾವ ಜಿಲೆಟಿನ್‌ ಸ್ಫೋಟಿಸಿ ಕಲ್ಲು ಬಂಡೆ ಪುಡಿ ಮಾಡಲಾಗುತ್ತಿದೆ. ಮನೆಗಳಿಗೆ ಹಾನಿ ಆಗುತ್ತಿರುವ ಕುರಿತು ಸಾರ್ವಜನಿಕರ ದೂರು ಅರಣ್ಯರೋಧನವಾಗಿದೆ. ಅರಣ್ಯಧಾಮ ಪ್ರದೇಶ, ಕಲ್ಲಿಗಾಗಿ ದೊಡ್ಡ ಗಾತ್ರದ ಮಣ್ಣುಗುಡ್ಡ ಅಗೆಯಲಾಗುತ್ತಿದ್ದು ನೂರಾರು ಅಡಿ ಅಳದ ಗುಂಡಿ ನಿರ್ಮಾಣವಾಗಿದೆ.

Edited By : Nagesh Gaonkar
Kshetra Samachara

Kshetra Samachara

25/10/2020 08:39 pm

Cinque Terre

86.17 K

Cinque Terre

2

ಸಂಬಂಧಿತ ಸುದ್ದಿ