ಕುಂದಗೋಳ : ನಾವು ಆದರ್ಶ ಪೈನಾನ್ಸ್ ಮ್ಯಾನೇಜರ್ ನಿಮ್ಗೆ ಪರ್ಸನಲ್ ಲೋನ್ ಬೇಕಾ ? ಎಂದು ವ್ಯಕ್ತಿಯೊಬ್ಬನನ್ನ ಮೇಸೆಜ್ ಮೂಲಕ ಅಪರಿಚಿತರು ನಂಬಿಸಿ ಬಳಿಕ ಮೊಬೈಲ್ ಕರೆ ಮುಖಾಂತರ ಸಂಭಾಷಣೆ ಮಾಡಿ ಬರೋಬ್ಬರಿ 46.032 ಹಣವನ್ನು ಗೂಗಲ್ ಪೇ, ಪೋನ್ ಪೇ ಮೂಲಕ ತಮ್ಮ ಖಾತೆಗೆ ಹಣ ವರ್ಗಾಯಿಸಿಕೊಂಡು ಮೋಸ ಮಾಡಿದ್ದು ಹಣ ಹಾಕಿದ ವ್ಯಕ್ತಿ ಇತ್ತ ಲೋನ್ ಪಡೆಯದೇ ಹಾಕಿದ ಹಣವು ಬಾರದೆ ಕಣ್ಣೀರಲ್ಲಿ ನೀರು ಸುರಿಸುತ್ತಿದ್ದಾನೆ.
ಆರ್ಥಿಕ ಕಷ್ಟದ ಸುಳಿಗೆ ಸಿಲುಕಿದ ಯುವಕ 5 ಲಕ್ಷ ಲೋನ್ ಗೆ ಆಸೆ ಬಿದ್ದು ಪ್ರತಿ ತಿಂಗಳು ಹತ್ತು ಸಾವಿರ ಹಣ ಕಟ್ಟಲು ಒಪ್ಪಿದ್ದಾನೆ. ವ್ಯಕ್ತಿಯ ನಂಬಿಕೆಯನ್ನು ಬಂಡವಾಳ ಮಾಡಿಕೊಂಡ ಮೋಸಗಾರರು ಆರ್.ಬಿ.ಐ ಟ್ಯಾಕ್ಸ್ , ಇನ್ಸೂರೆನ್ಸ್ ಟ್ಯಾಕ್ಸ್ ಎಂದು ಎಲ್ಲಿಲ್ಲದ ರೂಲ್ಸ್ ಹೇಳಿ ಲೋನ್ ಕೇಳಿದ ವ್ಯಕ್ತಿಯಿದ್ದ ಹಣ ಪಡೆದ ಬಳಿಕ ಪೋನ್ ಕರೆ ಸ್ವೀಕರಿಸದೆ ಮರಳಿ ಲೋನ್ ಹಣವು ನೀಡಿದೆ ಮೋಸ ಮಾಡಿದ್ದಾರೆ.
ಹೀಗೆ ಹಣದ ಕೊಂಡ ವ್ಯಕ್ತಿ ಕುಂದಗೋಳ ತಾಲೂಕಿನ ಚಿಕ್ಕ ಹರಕುಣಿ ಗ್ರಾಮದ ಆನಂದ ಎತ್ತಿನಮಠ ಎಂಬಾತನಾಗಿದ್ದು ಸದ್ಯ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ಕೊಡಲು ಮುಂದಾಗಿದ್ದು ನಾನು ಸಾಲ ಮಾಡಿ ಲೋನ್ ಪಡೆಯಬೇಕೆಂದು ನೀಡಿದ ಹಣವನ್ನಾದರೂ ಮರಳಿ ಕೊಡಿಸಿ ಎಂದು ವ್ಯಥೆ ಪಡುತ್ತಿದ್ದಾನೆ.
Kshetra Samachara
24/09/2020 01:17 pm