ಧಾರವಾಡ: ಧಾರವಾಡದಲ್ಲಿ ಗುರುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವತಿಯ ಸಾವಿಗೆ ಇದೀಗ ಕಾರಣ ಏನೆಂಬುದು ಗೊತ್ತಾಗಿದೆ.
ಧಾರವಾಡದ ಪ್ರತಿಷ್ಠಿತ ಖಾಸಗಿ ಸಂಸ್ಥೆಯಲ್ಲಿ ಕೆಎಎಸ್ ಕೋಚಿಂಗ್‌ಗೆ ಎಂದು ಬಂದಿದ್ದ ರಬಕವಿಯ ಗೀತಾ ಹೆಗ್ಗಣ್ಣವರ ಎಂಬ 22 ವರ್ಷದ ಯುವತಿ ಗುರುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೋಚಿಂಗ್‌ಗೆ ಎಂದು ಬಂದಿದ್ದ ಗೀತಾ ಧಾರವಾಡದ ಸಪ್ತಾಪುರ ಬಡಾವಣೆಯ ಪಿಜಿ ಒಂದರಲ್ಲಿ ಉಳಿದುಕೊಂಡಿದ್ದಳು.
ಬೆಳ್ಳಂಬೆಳಿಗ್ಗೆ ಗೀತಾ ನೇಣು ಬಿಗಿದುಕೊಂಡಿದ್ದನ್ನು ಕಂಡು ಪಿಜಿಯಲ್ಲಿನ ಗೆಳತಿಯರಿಗೆ ಬರಸಿಡಿಲು ಬಡಿದಂತಾಗಿತ್ತು. ಗೀತಾ ಸೌಮ್ಯ ಸ್ವಭಾವದವಳು. ಆತ್ಮಹತ್ಯೆ ಯಾಕೆ ಮಾಡಿಕೊಂಡಳು ಎಂದು ಎಲ್ಲರಿಗೂ ದಿಗ್ಭ್ರಮೆ. ಅದಕ್ಕೆ ಅಸಲಿ ಕಾರಣವೇ ಬೇರೆ ಇದೆ. ಗೀತಾ ಡೆತ್ ನೋಟ್‌ನಲ್ಲಿ ಎಲ್ಲವನ್ನೂ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಹಾಗಾದ್ರೆ ಆ ಡೆತ್ ನೋಟ್‌ನಲ್ಲಿ ಏನಿದೆ ಅನ್ನೋದನ್ನ ಸ್ವತಃ ಗೀತಾ ಅವರ ದೊಡ್ಡಪ್ಪ ರಾಯಪ್ಪ ಅವರೇ ಹೇಳ್ತಾರೆ ಕೇಳಿ.
ಕೇಳಿದ್ರಲ್ಲ, ಕೋಚಿಂಗ್‌ಗೆಂದು ಬಂದ ಪ್ರವೀಣ ಹಾಗೂ ಅಡಿವೆಪ್ಪ ಎಂಬ ದುರುಳರು, ಗೀತಾ ಅವರ ವೀಡಿಯೊ ಮಾಡಿ ದಿನಂಪ್ರತಿ ಕಿರುಕುಳ ನೀಡುತ್ತಿದ್ದಾರಂತೆ. ಇದರಿಂದ ನೊಂದ ಗೀತಾ, ಇನ್ನ್ಯಾವತ್ತೂ ಬಾರದ ಲೋಕಕ್ಕೆ ತೆರಳಿದ್ದಾಳೆ.
ಸದ್ಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದೂರು ದಾಖಲಿಸಿರುವ ಉಪನಗರ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ʼವಿದ್ಯಾಕಾಶಿʼ ಖ್ಯಾತಿಯ ಧಾರವಾಡದಲ್ಲಿಈ ಘಟನೆ ನಡೆದಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ತನ್ನ ಮಗಳು ಉನ್ನತ ಶಿಕ್ಷಣ ಪಡೆದು ಕೆಎಎಸ್ ಅಧಿಕಾರಿಯಾಗುತ್ತಾಳೆ ಎಂದುಕೊಂಡಿದ್ದ ಗೀತಾಳ ಪೋಷಕರ ಆಸೆ ಕೂಡ ನುಚ್ಚುನೂರಾಗಿದೆ. ಮಗಳ ಶವ ಕಂಡು ಪೋಷಕರು ಗೋಳಾಡುತ್ತಿದ್ದ ದೃಶ್ಯ ಕರುಳು ಹಿಂಡುವಂತಿತ್ತು.
Kshetra Samachara
10/03/2022 09:40 pm